ಪ್ರತಿ ಮನೆ ಮನದಲ್ಲಿ ಸ್ವಚ್ಛತಾ ಆಂದೋಲನ

kadala kinare
ಸ್ವಚ್ಛ ಕಡಲ ಕಿನಾರೆ ಅಭಿಯಾನದಡಿ ಕೋಟದ ಮಣೂರು ಬೀಚ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಕೋಟದ ತೋಳಾರ್ ಓಷಿಯನ್ ಪ್ರಾಡಕ್ಟ್ ಪ್ರಭಂಧಕ ಯೋಗೀಶ್ ಕುಮಾರ್ ಚಾಲನೆ ನೀಡಿದರು.
Published on

ಕೋಟ: ಸ್ವಚ್ಛತಾ ಆಂದೋಲನ ಪ್ರತಿಯೊಂದು ಮನೆ ಮನದಲ್ಲಿ ಆರಂಭಗೊಂಡಾಗ ದೇಶದಲ್ಲಿ ಸ್ವಚ್ಛತೆ ಧ್ಯೇಯ ಮೊಳಗುತ್ತದೆ ಎಂದು ಕೋಟದ ತೋಳಾರ್ ಓಷಿಯನ್ ಪ್ರಾಡಕ್ಟ್ ಪ್ರಬಂಧಕ ಯೋಗೀಶ್ ಕುಮಾರ್ ಹೇಳಿದರು.

ಉಡುಪಿ ಜಿಲ್ಲಾಡಳಿತ ನಿರ್ದೇಶನದ ಮೆರೆಗೆ ಕೋಟದ ಪಂಚವರ್ಣ ಯುವಕ ಮಂಡಲ, ಮಹಿಳಾ ಮಂಡಲ, ಕೋಟ ಗ್ರಾಪಂ, ಘನ ಹಾಗೂ ದ್ರವ ತ್ಯಾಜ್ಯ ನಿರ್ವಹಣಾ ಘಟಕ ಕೋಟ ಆಶ್ರಯದಲ್ಲಿ ನವೋದಯ ಫ್ರೆಂಡ್ಸ್ ಹರ್ತಟ್ಟು, ಜೆಸಿಐ ಸೀನಿಯರ್ ಕೋಟ, ತೋಳಾರ್ ಓಷಿಯನ್ ಪ್ರಾಡಕ್ಟ್ ಪಡುಕರೆ ಸಹಯೋಗದೊಂದಿಗೆ ಸ್ವಚ್ಛ ಕಡಲ ಕಿನಾರೆ ಅಭಿಯಾನದಡಿ ಕೋಟದ ಮಣೂರು ಬೀಚ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ಮಣೂರು ಪಡುಕರೆ ಬೀಚ್‌ನ ಸಾಕಷ್ಟು ತ್ಯಾಜ್ಯ ತೆರವುಗೊಳಿಸಲಾಯಿತು. ಕೋಟ ಪಿಡಿಒ ಸುರೇಶ್ ಬಂಗೇರ, ಕಾರ್ಯದರ್ಶಿ ಶೇಖರ್ ಮರವಂತೆ, ಸದಸ್ಯರಾದ ಶೇಖರ್ ಗಿಳಿಯಾರ್, ಶಾರದಾ ಆರ್.ಕಾಂಚನ್, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್, ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ, ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಸಂಸ್ಥೆ ಪದಾಧಿಕಾರಿಗಳು, ಪಂಚಾಯಿತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಪಂಚವರ್ಣ ಮಹಿಳಾ ಮಂಡಲ ಸಂಚಾಲಕಿ ಸುಜಾತಾ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net