

ಬೆಂಗಳೂರು: ಅಂತರಂಗ ಬಹಿರಂಗ ತಂಡದ ವತಿಯಿಂದ ಬಾಯ್ಬಡ್ಕಿ ಮತ್ತು ಬಾಯ್ ತುಂಬ ನಕ್ಬಿಡಿ ಎಂಬ ಎರಡು ಸಾಂಸಾರಿಕ ನಗೆ ನಾಟಕಗಳನ್ನು ಪ್ರದರ್ಶಿಸುತ್ತಿದೆ. ಎನ್.ಆರ್.ಕಾಲನಿಯ ಡಾ.ಸಿ.ಅಶ್ವಥ್ ಕಲಾಭವನದಲ್ಲಿ ಜು.27 ರಂದು ಸಂಜೆ 4ಕ್ಕೆ ಭೀಷ್ಮ ರಾಮಯ್ಯ ರಚಸಿ, ನಿರ್ದೇಶಿಸಿರುವ "ಬಾಯ್ಬಡ್ಕಿ' ನಾಟಕ, ಸಂಜೆ 7 ಕ್ಕೆ ನಾಗವೇಣಿ ರಂಗನ್ ರಚನೆಯ, ವನಿತಾ ರಂಗಾಯಣ ನಿರ್ದೇಶಿಸಿರುವ "ಬಾಯ್ ತುಂಬ ನಕ್ಬಿಡಿ' ನಾಟಕ ಪ್ರದರ್ಶನಗೊಳ್ಳಲಿದೆ.