

ಅಳವಂಡಿ: ನಾಟಕ ಕೆವಲ ಮನರಂಜನೆಗೆ ಸಿಮೀತವಾಗದೇ ಮನುಷ್ಯನ ಬದುಕಿನ ಸಂದೇಶ ಅಡಗಿರುತ್ತದೆ ಎಂದು ಹಜರತ್ ಸೈಯದ್ ಶಾಹ ಮೆಹಬೂಬ ಖಾದ್ರಿ ಹೇಳಿದರು.
ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಶ್ರೀ ವಿಜಯ ಮಹಾಂತೇಶ ನಾಟ್ಯ ಸಂಘದಿಂದ ಹಮ್ಮಿಕೊಂಡಿದ್ದ ‘ದಿಲ್ಲಿ ಹೊಕ್ಕ ಪುಂಡ ಹುಲಿ’ ಎಂಬ ಸಾಮಾಜಿಕ ನಾಟಕವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.
ರಾಜ ಮಹಾರಾಜರ ಕಾಲದಿಂದಲೂ ಇಂತಹ ರಸಮಂಜರಿ ಕಾರ್ಯಕ್ರಮ ಆಚರಿಸುತ್ತಾ ಬಂದಿದ್ದಾರೆ. ಇಂತಹ ಕಲೆ ಉಳಿಸಿ ಬೆಳೆಸಲು ಎಲ್ಲರ ಸಹಕಾರ ಅಗತ್ಯ. ಬೆಳಗಟ್ಟಿ ಗ್ರಾಮ ಪ್ರತಿವರ್ಷ ಇಂತಹ ನಾಟಕ ಪ್ರದರ್ಶನ ಮಾಡುತ್ತಿರುವುದು ಕೋಮು ಸೌಹಾರ್ದತೆ ಸಂಕೇತವಾಗಿದೆ.
ಮನುಷ್ಯ ಕಷ್ಟದ ಜೀವನದ ಬಲೆಯಲ್ಲಿ ಸಿಕ್ಕಿಕೊಂಡರೂ ಕಲೆಯನ್ನು ಪ್ರದರ್ಶಿಸುವಂತ ಆಸಕ್ತಿದಾಯಕ ಗುಣ ಹೊಂದಿರಬೇಕು ಅಂದಾಗ ನಾಟಕದ ತಿರುವುಗಳನ್ನು ಪ್ರೇಕ್ಷಕರಿಗೆ ಅರ್ಥ ಮಾಡಿಸಲು ಸಹಾಯವಾಗುತ್ತದೆ ಎಂದರು.
ಶಿಕ್ಷಣ ಪ್ರೇಮಿ ನೀಲಪ್ಪ ಕರಿಗಾರ, ಪಿಎಸ್‌ಐ ಪ್ರಹ್ಲಾದ್ ನಾಯಕ ಮಾತನಾಡಿದರು. ಪ್ರಮುಖರಾದ ಭರಮಪ್ಪ ನಗರ, ವಿಷ್ಣು ಹಾಳಕೇರಿ, ಹೊನ್ನಪ್ಪಗೌಡ ಪಾಟೀಲ್, ಅನ್ವರ ಗಡಾದ, ತೋಟಯ್ಯ ಅರಳಲೇಮಠ, ನಜರುದ್ದೀನ ಬಿಸರಳ್ಳಿ, ಮೋದಿನಸಾಬ ಆಲೂರ, ಉಮೇಶಗೌಡ ಪಾಟೀಲ್, ಜಂಗ್ಲಿಸಾಬ ಒಂಟಿ,
ಖಾದರಸಾಬ ಆಲೂರ, ಕನಕನಗೌಡ ಪಾಟೀಲ, ಗುಡದಪ್ಪ ಚಿಲವಾಡಗಿ, ಮೂಕಪ್ಪ ಜಕ್ಕಲಿ, ಶಿವನಗೌಡ ಪಾಟೀಲ, ಗುಡದಪ್ಪ ಕುರ್ತಕೋಟಿ, ದೇವೇಂದ್ರಗೌಡ ಪಾಟೀಲ್, ಮುಸ್ತುಸಾಬ ಕೆಂಪಸಾಬಣ್ಣವರ, ಹನುಮಂತಪ್ಪ ಕವಲೂರು, ಬಸನಗೌಡ ಪಾಟೀಲ್, ನಬಿಸಾಬ ಚಕ್ಕಡಿ, ರಾಜಾಭಕ್ಷಿ ಮೂಲಿಮನಿ, ಮರಿಯಪ್ಪ ಚಿಲವಾಡಗಿ, ಬಾಳಪ್ಪ ಯಕ್ಲಾಸಪೂರ, ಯಲ್ಲಪ್ಪ ಚೌಡ್ಕಿ, ಫಕೀರಪ್ಪ ಕಬ್ಬಿಣದ, ಬಸವರಾಜ ಕರಿಗಾರ, ಶಪಿಸಾಬ ದರಗದ, ಈರಣ್ಣ, ಸಣ್ಣ ನಿಂಗಪ್ಪ ಪುರದ ಇತರರಿದ್ದರು.