

ಬೆಂಗಳೂರು: ಮುಂಬರುವ ಐಪಿಎಲ್ 18ನೇ ಆವೃತ್ತಿಯಲ್ಲಿ ಕರ್ನಾಟಕದಿಂದ ಮತ್ತೋರ್ವ ಆಟಗಾರ ಕಣಕ್ಕಿಳಿಯುವ ನಿರೀಕ್ಷೆ ಹರಡಿದೆ. ಗಾಯ ಹಾಗೂ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಆಲ್ರೌಂಡರ್ ಮನೋಜ್ ಭಾಂಡಗೆ ಬದಲಿಗೆ 21 ವರ್ಷದ ಎಡಗೈ ಬ್ಯಾಟರ್ ರವಿಚಂದ್ರನ್ ಸ್ಮರಣ್ ಆರ್‌ಸಿಬಿ ತಂಡ ಸೇರಲಿದ್ದಾರೆ ಎನ್ನಲಾಗಿದೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಆರ್.ಸ್ಮರಣ್, ಆರ್‌ಸಿಬಿ ತಂಡದ ಪೂರ್ವಸಿದ್ದತಾ ತರಬೇತಿ ಶಿಬಿರದಿಂದಲೂ ಜತೆಗಿದ್ದು, ಸದ್ಯ ಅಭ್ಯಾಸ ಪಂದ್ಯಗಳಲ್ಲೂ ಬಿರುಸಿನ ಬ್ಯಾಟಿಂಗ್ ಮೂಲಕ ತರಬೇತಿ ಬಳಗದ ಗಮನಸೆಳೆದಿದ್ದಾರೆ ಎನ್ನಲಾಗಿದೆ. ಟೂರ್ನಿಯ ಆರಂಭಿಕ ಹಂತದಲ್ಲಿ ಮನೋಜ್ ಫಿಟ್ ಆಗದಿದ್ದರೆ ಅಥವಾ ಬೇರಾವುದೇ ಆಟಗಾರ ಇಂಜುರಿ ಸಮಸ್ಯೆಗೆ ಒಳಗಾದರೆ ಸ್ಮರಣ್‌ಗೆ ಐಪಿಎಲ್‌ನಲ್ಲಿ ಚೊಚ್ಚಲ ಬಾರಿ ಆಡುವ ಅವಕಾಶ ಲಭಿಸಲಿದೆ. ಆರ್‌ಸಿಬಿ ಹೊರತುಪಡಿಸಿ ಇತರ ್ರಾಂಚೈಸಿಗಳು ಸ್ಮರಣ್ ಸೇರ್ಪಡೆಗೆ ಆಸಕ್ತಿ ತೋರಿವೆ. 2024ರ ರಣಜಿ ಟ್ರೋಫಿಯಲ್ಲಿ ಕರ್ನಾಟಕ ಪರ ಪದಾರ್ಪಣೆ ಮಾಡಿದ ಸ್ಮರಣ್, ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ 10 ಪಂದ್ಯಗಳಲ್ಲಿ 2 ಶತಕ, 2 ಅರ್ಧಶತಕ ಸಹಿತ 433 ರನ್ ಗಳಿಸಿದ್ದರು. ನಂತರ ರಣಜಿ 2ನೇ ಹಂತದಲ್ಲೂ ಸತತ 2 ಶತಕ ಸಿಡಿಸಿ ಮಿಂಚಿದ್ದರು.
ಲಖನೌ ಸೂಪರ್‌ಜೈಂಟ್ಸ್‌ಗೆ ಶಾರ್ದೂಲ್?
ಲಖನೌ: ಸೌದಿ ಅರೇಬಿಯಾದಲ್ಲಿ ನಡೆದ ಮೆಗಾ ಹರಾಜಿನಲ್ಲಿ ಸೇಲಾಗದೆ ಉಳಿದ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಐಪಿಎಲ್‌ಗೂ ಮುನ್ನ ಲಖನೌ ಸೂಪರ್‌ಜೈಂಟ್ಸ್ ತಂಡಕ್ಕೆ ಬದಲಿ ಆಟಗಾರನಾಗಿ ಸೇರುವ ಸಾಧ್ಯತೆಗಳಿವೆ. ಸದ್ಯ ಲಖನೌ ಜೆರ್ಸಿ ಧರಿಸಿ ಅಭ್ಯಾಸದಲ್ಲಿ ಭಾಗವಹಿಸಿರುವ ಚಿತ್ರಗಳು ವೈರಲ್ ಆಗಿವೆ. ಲಖನೌ ಪ್ರಮುಖ ವೇಗಿಗಳಾದ ವೇಗಿ ಮಯಾಂಕ್ ಯಾದವ್, ಮೊಹ್ಸಿನ್ ಖಾನ್ ಹಾಗೂ ಆವೇಶ್ ಖಾನ್ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದು, ಐಪಿಎಲ್‌ನಲ್ಲಿ ಭಾಗವಹಿಸಲು ಬಿಸಿಸಿಐ ವೈದ್ಯಕೀಯ ತಂಡದಿಂದ ಗ್ರೀನ್‌ಸಿಗ್ನಲ್‌ಗಾಗಿ ಎದುರು ನೋಡುತ್ತಿದ್ದಾರೆ. ಈ ಮೂವರಲ್ಲಿ ಒಬ್ಬರು ಫಿಟ್ನೆಸ್ ಟೆಸ್ಟ್‌ನಲ್ಲಿ ವಿಲವಾದರೆ, ಶಾರ್ದೂಲ್ ಕಂಬ್ಯಾಕ್ ಮಾಡಲಿದ್ದಾರೆ. ಶಾರ್ದೂಲ್ ಇತ್ತೀಚೆಗೆ ರಣಜಿ ಟ್ರೋಫಿಯಲ್ಲಿ ಆಲ್ರೌಂಡ್ ನಿರ್ವಹಣೆ ತೋರಿ ಮಿಂಚಿದ್ದರು.