ಮದ್ದಡ್ಕ ಆಲಂದಿಲ ಮದರಸ ಬಳಿ ಚರಂಡಿ ಸಮಸ್ಯೆ

rain
ಮದ್ದಡ್ಕ ಆಲಂದಿಲ ಮದರಸ ಬಳಿ ಚರಂಡಿ ಇಲ್ಲದೆ ರಸ್ತೆಯಲ್ಲೇ ಹರಿಯುತ್ತಿರುವ ನೀರು.
Published on

ಬೆಳ್ತಂಗಡಿ: ಮದ್ದಡ್ಕ-ಆಲಂದಿಲ-ಸಬರಬೈಲು ಸಂಪರ್ಕ ರಸ್ತೆಯ ಆಲಂದಿಲ ಮದರಸ ಬಳಿ ಚರಂಡಿ ಇಲ್ಲದೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ.

ಈ ಪರಿಸರದಲ್ಲಿ ಚಿಕ್ಕದಾದ ಕಾಲು ಸಂಕ ಇದ್ದು ರಸ್ತೆಯ ಎರಡು ಬದಿಯಲ್ಲಿ ಚರಂಡಿಯಲ್ಲಿ ಮಣ್ಣು ತುಂಬಿದ್ದು ಸರಾಗವಾಗಿ ಹರಿದು ಹೋಗಬೇಕಾಗಿದ್ದ ನೀರು ಚರಂಡಿಯಲ್ಲಿ ಮಣ್ಣು ತುಂಬಿ ಈಗ ರಸ್ತೆಯಲ್ಲಿ ಹರಿದು ಹೋಗುತ್ತಿದೆ. ಸಮೀಪದಲ್ಲಿ ಮದರಸ ಇದ್ದು ಸ್ಥಳೀಯ ಶಾಲೆಗೆ ಹೋಗುವ ಮಕ್ಕಳು ಈ ರಸ್ತೆಯಲ್ಲಿ ಸಾಗಬೇಕಾಗಿದೆ. ರಸ್ತೆ ಮೂಡುಬಿದಿರೆ ಕಡೆ ಸಾಗುವ ಪ್ರಯಾಣಿಕರು ಪಡಂಗಡಿ-ಪೊಯ್ಯೆಗುಡ್ಡೆ ಸಂಪರ್ಕವಾಗಿ ಹೆಚ್ಚಿನ ವಾಹನಗಳು ಈ ರಸ್ತೆಯನ್ನು ಅವಲಂಬಿಸಿದ್ದು, ಕಿರಿದಾದ ಈ ರಸ್ತೆಯಲ್ಲಿ ಎದುರು ಕಡೆಯಿಂದ ಬರುವ ವಾಹನಗಳಿಗೆ ಸೈಡ್ ಕೊಡಲು ನಿಲ್ಲಿಸಿಯೇ ಹೋಗುವ ಅನಿವಾರ್ಯಕ್ಕೆ ವಾಹನ ಚಾಲಕರು ಸಿಲುಕಿದ್ದಾರೆ. ಸಂಬಂಧಿತ ಇಲಾಖೆ ಜನಪ್ರತಿನಿಧಿಗಳು ಗಮನಿಸಿ ಶೀಘ್ರವಾಗಿ ಇದಕ್ಕೆ ಸ್ಪಂದನೆ ನೀಡಬೇಕಾಗಿ ಸಾರ್ವಜನಿಕರ ಅಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net