ಡಾ. ವಿಜಯ ಸಂಕೇಶ್ವರರ ಸಂದರ್ಶನ ಚಂದನ ವಾಹಿನಿಯಲ್ಲಿ ಇಂದು ಪ್ರಸಾರ

dr vijaya sankeshwara
Published on

ಬೆಂಗಳೂರು: ದೂರದರ್ಶನ ಚಂದನ ವಾಹಿನಿಯ ವಾರದ ಅತಿಥಿಯಾಗಿರುವ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಪದ್ಮಶ್ರೀ ಪುರಸ್ಕೃತ ಡಾ.ವಿಜಯ ಸಂಕೇಶ್ವರ ಅವರ ಸಂದರ್ಶನ ಜೂ.24ರಂದು ರಾತ್ರಿ 8ಕ್ಕೆ ಪ್ರಸಾರವಾಗಲಿದೆ.

ಒಂದು ಲಾರಿಯಿಂದ ಆರಂಭವಾದ ಡಾ. ವಿಜಯ ಸಂಕೇಶ್ವರ ಅವರ ಬದುಕು ವಿಆರ್​ಎಲ್ ಸಂಸ್ಥೆ ಸ್ಥಾಪನೆ ಜತೆಗೆ ದೊಡ್ಡ ಉದ್ಯಮಿಯಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇಟ್ಟು ಸಾಧನೆ ಮಾಡಿರುವುದು ಸೇರಿ ವಿವಿಧ ಕ್ಷೇತ್ರಗಳ ಸಾಧನೆ ಮತ್ತು ಅವರು ಬೆಳೆದು ಬಂದ ಸಾಹಸಮಯ ಹಾದಿ ಬಗ್ಗೆ ಸಂದರ್ಶನ ಬೆಳಕು ಚೆಲ್ಲಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net