

ಬಾಗಲಕೋಟೆ: ಮಹಿಳೆಯರಿಗೆ ಸೀಮಂತ ಮಾಡುವುದು ಸಾಮಾನ್ಯ, ಆದರೆ ಇಲ್ಲೊಬ್ಬರು ಸಾಕು ನಾಯಿಗೆ ಸೀಮಂತ ಮಾಡಿದ್ದಾರೆ. ನಾಯಿ ಸೀಮಂತದ ಫೋಟೋ, ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗಿವೆ.
ಗುಳೇದಗುಡ್ಡದ ರಂಗಭೂಮಿ ಕಲಾವಿದೆ ಜ್ಯೋತಿ ಎಂಬುವರು, ತಮ್ಮ ಮನೆಯಲ್ಲಿ ಸಾಕಿದ್ದ ನಾಯಿಗೆ ಸೀಮಂತ ಮಾಡಿದ್ದಾರೆ. ಸೀಮಂತ ಮಾಡಿಸಿಕೊಂಡ ಒಂದು ವಾರದ ಬಳಿಕ ಜೂಲಿ ಹೆಸರಿನ ಶ್ವಾನ ಆರು ಮರಿಗಳಿಗೆ ಜನ್ಮ ನೀಡಿದೆ. ಹಿಂದೆ ಚಿಂಕವ್ವ ಹೆಸರಿನ ಶ್ವಾನಕ್ಕೂ ಕೂಡ ಜ್ಯೋತಿ ಸೀಮಂತ ಮಾಡಿದ್ದರು.
ಗರ್ಭಿಣಿ ನಾಯಿಗೆ ಹಸಿರು ಬಳೆ, ಹಸಿರು ಸೀರೆ, ಕುಂಕುಮ-ಅರಿಸಿನ ಹಚ್ಚಿ, ಆರತಿ ಬೆಳಗಿ ಸೀಮಂತ ಕಾರ್ಯ ಮಾಡಿದ್ದಾರೆ. ಶ್ವಾನಕ್ಕೆ ಅಚ್ಚುಮೆಚ್ಚಿನ ಹಣ್ಣು-ಹಂಪಲು, ಸಿಹಿ ತಿನಿಸು ಕೂಡ ನೀಡಿದ್ದಾರೆ. ಕಲಾವಿದೆಯ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಸೀಮಂತ ಕಾರ್ಯ ನಡೆಯುವ ವೇಳೆ ಶ್ವಾನ ಶಾಂತತೆಯಿಂದ ಕುಳಿತಿರುವ ದೃಶ್ಯ ವೈರಲ್ ಆಗಿದೆ.