ಹೈನುಗಾರಿಕೆಗೆ ಡಾ.ವರ್ಗೀಸ್ ಸೇವೆ ಅಪಾರ

FotoJet (1)
Published on

ಚಿಮುಲ್ ಮಾಜಿ ನಿರ್ದೇಶಕ ಊಲವಾಡಿ ಅಶ್ವತ್ಥನಾರಾಯಣ ಬಾಬು ಹೇಳಿಕೆ

ಚಿಂತಾಮಣಿ : ಹೈನುಗಾರಿಕೆಗೆ ಡಾ.ವರ್ಗೀಸ್ ಅವರು ಸಲ್ಲಿಸಿರುವ ಅಪಾರ ಸೇವೆಯನ್ನು ಸ್ಮರಿಸಲು ಅವರ ಜನ್ಮ ದಿನವನ್ನು ವಿಶ್ವ ಹಾಲು ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಊಲವಾಡಿ ಅಶ್ವತ್ಥನಾರಾಯಣ ಬಾಬು ಹೇಳಿದರು.

ನಗರದಲ್ಲಿನ ಸಾರ್ವಜನಿಕ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರಯ ರೋಗಿಗಳಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ವಿತರಿಸಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವ್ಯಾಪ್ತಿಯ 8 ತಾಲೂಕುಗಳ ಪೈಕಿ ಚಿಂತಾಮಣಿಯಲ್ಲಿ 1 ಲಕ್ಷ 40 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಒಕ್ಕೂಟದ ವಿಭಜನೆಯನ್ನು ಮಾಡಿದ್ದು, ಮೆಗಾಡೇರಿ ಪಕ್ಕದ 9 ಎಕರೆ 14 ಕುಂಟೆ ಜಮೀನನ್ನು ಹೆಚ್ಚುವರಿ ಮಂಜೂರು ಮಾಡಲಾಗಿದೆ. ಕರ್ನಾಟಕ ಹಾಲು ಮಹಾಮಂಡಳಿ ರೈತರಿಂದ ಜಮೀನು ಪಡೆದು ಬಾಗೇಪಲ್ಲಿ ರಸ್ತೆಯ ಸಾದಲಿ ಬಳಿ ಕಳಪೆ ುಡ್ ತಯಾರಿಸುತ್ತಿದ್ದು, ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಸಂಬಂಧಪಟ್ಟವರು ಕ್ರಮ ತೆಗೆದುಕೊಳ್ಳಬೇಕು ಎಂದು ಈ ವೇಳೆ ಒತ್ತಾಯಿಸಿದರು.

ಚಿಂತಾಮಣಿ ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಡಿ.ಎಂ.ಡಾ.ಮಹೇಶ್, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಹರ್ಷಿತಾ, ಕತ್ತಿರಗುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪಾಲು ನಾರಾಯಣಸ್ವಾಮಿ, ವಿಸ್ತರಣಾಧಿಕಾರಿ ಶಬ್ಬೀರ್ ಪಾಷಾ, ಗುಲಾಬ್‌ಜಾನ್, ವಿನಯ್‌ಕುಮಾರ್, ವಸಂತಲಕ್ಷ್ಮೀ, ಪ್ರತಿಭಾ, ತಾಲೂಕಿನ ವಿವಿಧ ಡೇರಿ ಅಧ್ಯಕ್ಷರು ಮತ್ತು ಕಾರ್ಯದಶಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net