ಡಾ.ಜಾಧವ್ ನಾಮಪತ್ರ ಸಲ್ಲಿಕೆ 18 ಕ್ಕೆ: ಬಿ.ವೈ ವಿಜಯೇಂದ್ರ, ನಿಖಿಲ್ ಕುಮಾರಸ್ವಾಮಿ ಸಾಥ್

umesh jadhav
Published on



ಕಲಬುರಗಿ: ಬಿಜೆಪಿ ಅಭ್ಯರ್ಥಿಯಾಗಿ ನಾನು ಗುರುವಾರ ಅಧಿಕೃತವಾಗಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದು, ಕಾರ್ಯಕರ್ತರು, ಅಭಿಮಾನಿಗಳು ಅಂದಿನ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ಡಾ.ಉಮೇಶ ಜಾಧವ್ ಮನವಿ ಮಾಡಿದ್ದಾರೆ. ನೆಹರು ಗಂಜ್ ನಗರೇಶ್ವರ ಶಾಲೆಯಿಂದ ಬೆಳಗ್ಗೆ ೧೦ಕ್ಕೆ ಶುರುವಾಗುವ ಮೆರವಣಿಗೆ ಸೂಪರ್ ಮಾರ್ಕೆಟ್, ಜಗತ್ ಮಾರ್ಗವಾಗಿ ಡಿಸಿ ಕಚೇರಿಗೆ ತೆರಳಲಿದ್ದು, ಮೈತ್ರಿ ಪಕ್ಷದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಬಳಿಕ ನಾಮಪತ್ರ ಬಿಜೆಪಿ ರಾಜ್ಯಾಧ್ಯP್ಷÀ ಬಿ.ವೈ. ವಿಜಯೇಂದ್ರ ಹಾಗೂ ಜೆಡಿಎಸ್ ಯುವ ಮುಖಂಡ ನಿಖಿಲï ಕುಮಾರಸ್ವಾಮಿ ಜತೆ ನಾಮಪತ್ರ ಸಲ್ಲಿಸಲಾಗುವುದು. ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಮತ್ತು ಕಲಬುರಗಿ ಕ್ಷೇತ್ರದಿಂದ ಎರಡನೇ ಬಾರಿಗೆ ಕಮಲ ಅರಳಿಸುವ ಮಹತ್ವದ ಚುನಾವಣೆ ಇದಾಗಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net