

ಬೆಂಗಳೂರು: ಪ್ರಾಚೀನ ಕಾಲದ ಶಾಸನಗಳು ಅನೇಕ ವಿಷಯಗಳ ಅಧ್ಯಯನಕ್ಕೆ ಪ್ರಮುಖ ಆಕರಗಳು. ಹೀಗಾಗಿ ಅವುಗಳ ಅಧ್ಯಯನದಿಂದ ಇತಿಹಾಸದ ವಿವಿಧ ಆಯಾಮಗಳನ್ನು ತಿಳಿದುಕೊಳ್ಳಬಹುದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಶಾಸನ ಶಾಸ್ತ್ರ ವಿಭಾಗದ ನಿವೃತ್ತ ನಿರ್ದೇಶಕ ಡಾ.ಟಿ.ಎಸ್. ರವಿಶಂಕರ್ ಅಭಿಪ್ರಾಯಪಟ್ಟಿದ್ದಾರೆ.
'ಉತ್ತರ ಭಾರತದ ಶಾಸನಗಳಲ್ಲಿ ರೂಪಿತವಾದ ಶಿಣ ವ್ಯವಸ್ಥೆ (ಕ್ರಿ.ಪೂ. 3 ರಿಂದ ಕ್ರಿ.ಶ. 12)' ಎಂಬ ವಿಷಯದ ದಿ ಮಿಥಿಕ್ ಸೊಸೈಟಿ ಭಾನುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಖಾರವೇಲನ ಹಾಥಿಗುಂಫಾ ಶಾಸನ ಮತ್ತು ರುದ್ರದಾಮನ್ನ ಜುನಾಗಡ್ ಶಾಸನಗಳು ಪ್ರಾಚಿನ ಶಿಣ ಪದ್ಧತಿ ಕುರಿತಂತೆ ಮಹತ್ವದ ಬೆಳಕನ್ನು ಚೆಲ್ಲುತ್ತವೆ. ಇದೇ ರೀತಿಯಾಗಿ ಕೌಟಿಲ್ಯನ ಅರ್ಥಶಾಸವು ಮತ್ತೊಂದು ಪ್ರಮುಖವಾದ ಆಕರವಾಗಿದೆ. ಈ ಶಾಸನಗಳನ್ನು ಅಧ್ಯಯನ ಮಾಡಿದಾಗ ಆ ಕಾಲದ ಶಿಕರು, ಶಿಕ ವೃತ್ತಿ, ವಿದ್ಯಾರ್ಥಿಗಳು, ವಿದ್ಯಾಲಯಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದವು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಹಿಂದೆ ದೇವಾಲಯಗಳೂ ಅಧ್ಯಯನ ಕೇಂದ್ರಗಳಾಗಿದ್ದವು. ನಳಂದ, ತಶಿಲಾ, ಕಂಚಿ ಮುಂತಾದ ವಿಶ್ವವಿದ್ಯಾಲಯಗಳು ಭೌಗೋಳಿಕ ಮೇರೆ ಮತ್ತು ಭಾಷಾ ಸಂಕುಚಿತತೆಯನ್ನು ಮೀರಿ ಕಾರ್ಯನಿರ್ವಹಿಸಿದ ಕಾರಣ ಅಂತರಾಷ್ಟ್ರೀಯ ಖ್ಯಾತಿಯನ್ನು ಹೊಂದಿದವು. ಈ ಕಾರಣದಿಂದಲೇ ಅವುಗಳ ಕಾರ್ಯ ವೈಖರಿ ವಿದೇಶಿಯರ ಪ್ರಶಂಸೆಗೂ ಪಾತ್ರವಾಯಿತು. ಶಿಣ ಸಾಂಸತಿಕ ಏಕತೆಯ ಪ್ರತಿಕವಾಗಿದೆ. ಇಂದಿನ ದಿನಗಳಲ್ಲಿ ಭಾರತೀಯ ಶಿಣ ವ್ಯವಸ್ಥೆ ಜಾಗತಿಕ ಮನ್ನಣೆಯನ್ನು ಪಡೆಯಬೇಕು. ಈ ನಿಟ್ಟಿನಲ್ಲಿ ನಮ್ಮ ಪ್ರಾಚಿನ ಶಿಣ ವ್ಯವಸ್ಥೆಯ ಕೂಲಂಕಶ ಅಧ್ಯಯನ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಶಾಸನ ತ ಡಾ. ಎಂ.ಜಿ. ನಾಗರಾಜ್, ದಿ ಮಿಥಿಕ್ ಸೊಸೈಟಿ ಆಡಳಿತ ಮಂಡಳಿ ಸದಸ್ಯರಾದ ಎಸ್. ರವಿ, ಪ್ರೊ.ಎಂ.ಜಿ. ಚಂದ್ರಕಾಂತ್, ಹಿರಿಯ ಸಂಶೋಧನಾ ಸಂಯೋಜಕ ಡಾ. ಪಿ. ಜಯಸಿಂಹ ಮತ್ತಿತರರಿದ್ದರು.