

ಹೆಬ್ರಿ: ತಿಂಗಳೆ ಧರ್ಮದೈವಗಳ ನೇಮೋತ್ಸವ ಮಾ.6ರಿಂದ 8ರ ತನಕ ನಡೆಯಲಿದ್ದು, 8ರಂದು 64ನೇ ಸಾಹಿತ್ಯೋತ್ಸವದಲ್ಲಿ ಉಡುಪಿ ಪ್ರಸಾದ್ ನೇತ್ರಾಲಯದ ಡಾ.ಕೂಡ್ಲು ಕೃಷ್ಣ ಪ್ರಸಾದ್ ಅವರಿಗೆ ತಿಂಗಳೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸಾವಂತವಾಡಿ ಸಿಂಧೂದುರ್ಗಾ ಸಂಸ್ಥಾನದ ರಾಜ ಬಹದ್ದೂರು ಕೇಮ್ ಸಾವಂತ್ ಭೋಸ್ಲೆ ಅಧ್ಯಕ್ಷತೆ ವಹಿಸುವರು. ಡಾ.ವೀಣಾ ಬನ್ನಂಜೆ ಅನುಭವ ಮಂಟಪದ ಬಗ್ಗೆ ಮತ್ತು ಶ್ರೀಕಾಂತ್ ಶೆಟ್ಟಿ ಕಾರ್ಕಳ ಇತಿಹಾಸದ ಪುಟಗಳಲ್ಲಿ ಸಾವಂತವಾಡಿ ಬಗ್ಗೆ ಮಾತನಾಡುವರು. ಡಾ.ಹಾಲಾಡಿ ಶ್ರೀನಿವಾಸ ಶೆಟ್ಟಿ ಕುದ್ರುಮನೆ, ವಿಜಯ ಪಾತ್ರೇಪೆಕರ್ ಮುಂಬೈ ಉಪಸ್ಥಿತರಿರುವರು. ಗುರು ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನದ ಚಕ್ರವ್ಯೆಹ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ತಿಳಿಸಿದ್ದಾರೆ.