

ಹಾಸನ: ಮಲೆನಾಡು ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಾಗಿ ಡಾ.ಎಚ್.ಜೆ.ಅಮರೇಂದ್ರ ಅವರು ಅಧಿಕಾರ ವಹಿಸಿಕೊಂಡರು.
ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಟಿ.ದ್ಯಾವೇಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಚೌಡವಳ್ಳಿ ಜಗದೀಶ್ ಮತ್ತು ಖಜಾಂಚಿ ಎಚ್.ಪಿ.ಪಾರ್ಶ್ವನಾಥ್ ಆದೇಶ ಪತ್ರ ನೀಡಿದರು.
ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಡಾ.ಎಚ್.ಜೆ.ಅಮರೇಂದ್ರ ಅವರು ಕಾರ್ಯನಿರ್ವಹಿಸುತ್ತಿದ್ದರು. ಕಾಲೇಜು ಪ್ರಾಂಶುಪಾಲರಾಗಿದ್ದ ಡಾ.ಕೃಷ್ಣಯ್ಯ ಡಾ.ಅಮರೇಂದ್ರ ಅವರಿಗೆ ಜವಾಬ್ದಾರಿ ವಹಿಸಿದರು.
ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಬೂವನಹಳ್ಳಿ ಶ್ರೀನಿವಾಸ್, ಬಿ.ಆರ್.ರಾಜಶೇಖರ್, ನಾಗರಾಜ್ ಜೈನ್, ಶಾಂತಿಗ್ರಾಮ ಶಂಕರ್, ಬಿ.ಎಸ್. ಸುರೇಶ್, ಕಾಲೇಜು ರಿಜಿಸ್ಟ್ರಾರ್ ಕುಮುದಾ, ಅಧೀಕ್ಷಕ ಆರ್.ರಘು ಪ್ರಸಾದ್, ಬಿ.ಆರ್. ರವಿ, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಮಾಧ್ಯಮ ಸಂಯೋಜಕ ಶಿವಕುಮಾರ್ ಇತರರು ಇದ್ದರು.