ಸಮಾಜಕ್ಕೆ ಡಾ.ಜಿ.ಶಂಕರ್ ಕೊಡುಗೆ ಅಪಾರ

gan (1)
Published on

ಗಂಗೊಳ್ಳಿ: ನಾಡೊಜ ಡಾ.ಜಿ.ಶಂಕರ ನಾಡುಕಂಡ ಅಪರೂಪದ ವ್ಯಕ್ತಿ. ಶ್ರೇಷ್ಠ ಮಾನವತಾವಾದಿ. ಸಮಾಜದ ದುರ್ಬಲರಿಗಾಗಿ ಹಲವು ಕಾರ್ಯಕ್ರಮ ರೂಪಿಸಿ ಯಶಸ್ಸು ಕಂಡವರು. ಶಿಕ್ಷಣ, ಸಾಮಾಜಿಕ, ಆರೋಗ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾದುದು. ಜಿ.ಶಂಕರ್ ಅವರ 70ನೇ ಜನ್ಮದಿನದ ಅಂಗವಾಗಿ ಅವರ ಆಶಯದಂತೆ 70 ಮಂದಿ ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ ಎಂದು ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕ ಸ್ಥಾಪಕಾಧ್ಯಕ್ಷ, ಬಗ್ವಾಡಿ ಮೊಗವೀರ ಮಹಾಜನ ಸೇವಾ ಸಂಘ ಶಾಖಾಧ್ಯಕ್ಷ ಉದಯಕುಮಾರ್ ಹಟ್ಟಿಯಂಗಡಿ ಹೇಳಿದರು.

ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಅವರ 70ನೇ ಹುಟ್ಟುಹಬ್ಬವನ್ನು ಹೆಮ್ಮಾಡಿಯ ಮತ್ಸೃಜ್ಯೋತಿ ಸಭಾಂಗಣದಲ್ಲಿ ‘ಜಿ.ಎಸ್.70 ಹೆಮ್ಮಾಡಿ’ ನೇತೃತ್ವದಲ್ಲಿ ವಿನೂತನವಾಗಿ ಆಚರಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ 70 ಜನ ಸಾಧಕರನ್ನು ಸನ್ಮಾನಿಸಲಾಯಿತು.

ಮೊಗವೀರ ಮಹಾಜನ ಸೇವಾ ಸಂಘ ಮಾಜಿ ಶಾಖಾಧ್ಯಕ್ಷ ಎಂ.ಎಂ.ಸುವರ್ಣ ಅನಿಸಿಕೆ ಹಂಚಿಕೊಂಡರು. ಭಾಸ್ಕರ ಬಟ್ಟೆಕುದ್ರು ಪ್ರಾರ್ಥಿಸಿದರು. ಬಗ್ವಾಡಿ ದೇವಳ ಪ್ರಧಾನ ಅರ್ಚಕ ಗಿರೀಶ್ ಭಟ್, ನಿವೃತ್ತ ಮುಖ್ಯಶಿಕ್ಷಕ ರಾಜೀವ ಶೆಟ್ಟಿ ಬಗ್ವಾಡಿ ಮಾತನಾಡಿದರು. ಲೋಹಿತಾಶ್ಚ ಆರ್.ಕುಂದರ್ ನಿರ್ವಹಿಸಿದರು. ಜಿ.ಎಸ್.70 ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net