ಕಾಪು ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಚಂಡಿಕಾಯಾಗ

pdb
Published on

ಪಡುಬಿದ್ರಿ: ಕಾಪು ಪೇಟೆ ಗೌಡ ಸಾರಸ್ವತ ಸಮಾಜದ ಆಡಳಿತಕ್ಕೆ ಒಳಪಟ್ಟಿರುವ ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ವರ್ಷಂಪ್ರತಿಯಂತೆ ಜರುಗುವ ಚಂಡಿಕಾಯಾಗ ಪೂರ್ಣಾಹುತಿ ಮತ್ತು ಅನ್ನಸಂತರ್ಪಣೆ ಮಂಗಳವಾರ ನೆರವೇರಿತು.

ಹಳೇ ಮಾರಿಗುಡಿ ಅರ್ಚಕ ವೇದಮೂರ್ತಿ ಕಮಲಾಕ್ಷ ಭಟ್ ನೇತೃತ್ವದಲ್ಲಿ ವೈದಿಕ ವೃಂದದ ಸಹಭಾಗಿತ್ವದೊಂದಿಗೆ ಚಂಡಿಕಾಯಾಗ ಪೂರ್ಣಾಹುತಿಯ ಧಾರ್ಮಿಕ ವಿಧಿ ವಿಧಾನ ಸಂಪನ್ನಗೊಂಡಿತು. ಬಳಿಕ ಹಾಲು ಪಾಯಸ ಸಹಿತ ನಡೆದ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡರು. ಸಂಜೆ ಶ್ರೀ ಮಾರಿಯಮ್ಮ ದೇವಿಯ ಮೈದರ್ಶನ ಸೇವೆ ನಡೆದು ಭಕ್ತರಿಗೆ ಅನುಗ್ರಹ ಪ್ರಸಾದ ವಿತರಿಸಲಾಯಿತು.

ಕಾಪು ಹಳೇ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಪ್ರಸಾದ್ ಗೋಕುಲ್‌ದಾಸ್ ಶೆಣೈ, ಮಾಜಿ ಆಡಳಿತ ಮೊಕ್ತೇಸರ ಶ್ರೀಧರ ಆನಂದರಾಯ ಶೆಣೈ, ಮೊಕ್ತೇಸರರಾದ ಸದಾಶಿವ ರಾಧಾಕೃಷ್ಣ ಕಾಮತ್, ರಾಜೇಶ್ ಮಾಧವರಾಯ ಶೆಣೈ, ರಾಮ ಶಶಿಧರ ನಾಯಕ್, ಶ್ರೀಕಾಂತ ಲಕ್ಷ್ಮೀನಾರಾಯಣ ಭಟ್, ಆಡಳಿತ ಮಂಡಳಿ ಸದಸ್ಯರಾದ ಚಂದ್ರಕಾಂತ್ ಕಾಮತ್, ಮೋಹನದಾಸ್ ಕಿಣಿ, ಕೃಷ್ಣಾನಂದ ನಾಯಕ್, ರಾಜೇಶ್ ಶೆಣೈ ಮಜೂರು, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ವಿನಯಕುಮಾರ್ ಸೊರಕೆ, ಲಾಲಾಜಿ ಆರ್.ಮೆಂಡನ್, ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಹಾಗೂ ವಿವಿಧ ಗಣ್ಯರು, ಕಾಪು ಪೇಟೆಯ ಹತ್ತು ಸಮಸ್ತರು, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net