

ಬೆಂಗಳೂರು: ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ದಾವಣಗೆರೆಯ ಮೋಹನ್ ಕೊಂಡಜ್ಜಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಪ್ರತಿಷ್ಠಾನಕ್ಕೆ ಕಾರ್ಯಕಾರಿ ಸಮಿತಿ ರಚಿಸಿ ಆದೇಶ ಹೊರಡಿಸಿದೆ. ಜಿ. ಗುಂಡಣ್ಣ (ಚಿಕ್ಕಮಗಳೂರು), ಎಂ.ಎಸ್. ಆಶಾದೇವಿ (ಬೆಂಗಳೂರು), ಜಾಣಗೆರೆ ವೆಂಕಟರಾಮಯ್ಯ (ತುಮಕೂರು), ಚಂದ್ರಶೇಖರ ನಂಗಲಿ (ಕೋಲಾರ), ಮೂಡ್ನಾಕೂಡು ಚಿನ್ನಸ್ವಾಮಿ (ಚಾಮರಾಜನಗರ), ಸಾಸ್ವೆಹಳ್ಳಿ ಸತೀಶ್ (ಶಿವಮೊಗ್ಗ), ಸಿರಾಜ್ ಅಹ್ಮದ್ (ರಾಯಚೂರು) ಮತ್ತು ಆರ್.ಜಿ.ಹಳ್ಳಿ ನಾಗರಾಜ್ (ಬೆಂಗಳೂರು) ಪ್ರತಿಷ್ಠಾನದ ಸದಸ್ಯರಾಗಿ ನೇಮಕಗೊಂಡಿದ್ದಾರೆ.