

ಮದ್ದೂರು: ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಂಠಿ ಸುರೇಶ್ ನೇತೃತ್ವದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿ, ಸಿಹಿ ವಿತರಿಸಲಾಯಿತು.
ಕಂಠಿ ಸುರೇಶ್ ಮಾತನಾಡಿ, ರಾಜ್ಯ ಕಂಡ ಅತ್ಯಂತ ಸರಳ, ಸಜ್ಜನಿಕೆಯ ಹಾಗೂ ಪ್ರಾಮಾಣಿಕರಾದ ಜಿ.ಪರಮೇಶ್ವರ್ ಅವರು, ಪಂಚ ಗ್ಯಾರಂಟಿ ಯೋಜನೆಗಳ ಪ್ರಣಾಳಿಕೆ ರೂಪಿಸುವ ಮೂಲಕ ಬಡ ಜನರ ನೆಮ್ಮದಿಯ ಜೀವನಕ್ಕೆ ನಾಂದಿ ಹಾಡಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ನಾಡ ಕಂಡ ಧೀಮಂತ ನಾಯಕ, ಧ್ವನಿ ಇಲ್ಲದ ಸಮುದಾಯಗಳ ಪರ ಚಿಂತಿಸುವ ವ್ಯಕ್ತಿತ್ವ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ದೂರ ದೃಷ್ಟಿಯ ರಾಜಕಾರಣಿ, ಖ್ಯಾತ ಶಿಕ್ಷಣ ತಜ್ಞ, ಮಾತೃ ಹೃದಯಿ ಹಾಗೂ ಯುವಕರ ಆಶಾ ಕಿರಣರಾದ ಜಿ.ಪರಮೇಶ್ವರ ಅವರಿಗೆ ಭಗವಂತ ಆಯಸ್ಸು, ಆರೋಗ್ಯ ನೀಡಿ ರಾಜಕೀಯದಲ್ಲಿ ಉನ್ನತ ಸ್ಥಾನ ಮಾನ ಸಿಗುವಂತೆ ಮಾಡಲಿ ಎಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮುಖಂಡರಾದ ರವಿಕುಮಾರ್, ಕರಡಗೆರೆ ಯೋಗೇಶ್, ರಾಜೇಂದ್ರ, ಮರಿದೇವರು, ಕುಮಾರ್, ಚೌಡಯ್ಯ ಸೇರಿದಂತೆ ಇತರರು ಇದ್ದರು.