

ತುಮಕೂರು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿರುವಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕಮೀಷನ್ ದಂಧೆ ನಡೆದಿರುವ ಬಗ್ಗೆ ನನಗೆ ಅರಿವಿಲ್ಲ, ಸಿಎಂ ಆಗಿದ್ದ ಕುಮಾರಸ್ವಾಮಿಯೇ ಎಂದು ಶಾಸಕ ಡಾ.ಜಿ.ಪರಮೇಶ್ವರ ಪ್ರತಿಕ್ರಿಯಿಸಿದರು.
ನಗರದಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ನಾನೂ ಡಿಸಿಎಂ ಆಗಿದ್ದೆ ಆದರೆ, ಈ ಕಮಿಷನ್ ದಂಧೆಯಲ್ಲಿ ಕಾಂಗ್ರೆಸ್ ಸಚಿವರು ಎಂದೂ ಭಾಗಿಯೂ ಆಗಿಲ್ಲ, ನನ್ನ ಗಮನಕ್ಕೂ ಅದು ಬಂದಿಲ್ಲ ಎಂದರು.
ಮೈತ್ರಿ ಸರ್ಕಾರದಲ್ಲಿ ಕಮಿಷನ್ ನಡೆದಿದೆ ಎಂದು ಕುಮಾರಸ್ವಾಮಿ ಈಗ ಹೇಳಿದ್ದಾರೆ ಆದರೆ, ಯಾವ ಸಚಿವಾಲಯದಲ್ಲಿ, ಯಾವ ಸಚಿವರು ಅಕ್ರಮ ಮಾಡಿದ್ದಾರೆ ಎಂಬುದನ್ನು ಅವರೇ ಹೇಳಬೇಕು, ಏಕೆಂದರೇ ಅವರು ಅಂದು ಸಿಎಂ ಆಗಿದ್ದವರು ಜವಬ್ಧಾರಿಯಿಂದಲೇ ಹೇಳಿರುತ್ತಾರೆ ಎಂದರು.