ಡಾ. ಡಿ.ದೇವರಾಜು ಅವರನ್ನು ಬೀಳ್ಕೊಡಲಾಯಿತು.

ಡಾ. ಡಿ.ದೇವರಾಜು ಅವರನ್ನು ಬೀಳ್ಕೊಡಲಾಯಿತು.
Published on

ಸೋಮವಾರಪೇಟೆ: ಯಡೂರು ಗ್ರಾಮದ ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿವೃತ್ತಿ ಹೊಂದಿದ ಸಹಾಯಕ ಪ್ರಾಧ್ಯಾಪಕ ಡಾ. ಡಿ.ದೇವರಾಜು ಅವರನ್ನು ಬೀಳ್ಕೊಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಎಂ.ಎಂ. ಸುನೀತ ವಹಿಸಿ ಮಾತನಾಡಿ, ಇದೊಂದು ಹೃದಯಸ್ಪರ್ಶಿ ಬೀಳ್ಕೊಡುಗೆಯಾಗಿದ್ದು, ನಿರಂತರ ಬೋಧನೆ, ಸಂಶೋಧನೆ ಮತ್ತು ಆಡಳಿತ ನೀಡಿದ್ದ ಅಪರೂಪದ ವಾಗ್ಮಿ, ಸಾವಿರಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದರು ಎಂದರು.

ಪ್ರಾಧ್ಯಾಪಕ ನಂಜುಂಡಸ್ವಾಮಿ ಮಾತನಾಡಿ, ಡಾ.ದೇವರಾಜ್ ಅವರು ಕೇವಲ ಒಬ್ಬ ಬೋಧಕರು ಮಾತ್ರವಲ್ಲ, ಅವರೊಬ್ಬ ಕಲಾವಿದ, ಹಾಡುಗಾರ, ಮತ್ತು ಮಾನವಪ್ರೇಮಿ. ಬಹುಭಾಷಾ ಜ್ಞಾನಿ ಎಂದು ಶ್ಲಾಘೀಸಿದರು.

ಪ್ರಾಧ್ಯಾಪಕರುಗಳಾದ ಡಾ. ಮಹದೇವಪ್ರಸಾದ್, ಎಂ.ಎಸ್. ಶಿವಮೂರ್ತಿ, ಎಂ.ಎಂ.ಸುನೀತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net