

ಕಲಬುರಗಿ : ಖ್ಯಾತ ಅಂತಾರಾಷ್ಟ್ರೀಯ ವಾಗ್ಮಿಗಳಾಗಿರುವ ಸಿಸ್ಟರ್ ಬಿ.ಕೆ.ಶಿವಾನಿ ದೀದಿ ಅವರು ಬ್ರಹ್ಮಕುಮಾರಿ ಆಶ್ರಮದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಲಬುರಗಿಗೆ ಅಗಮಿಸಿದ್ದಾರೆ. ಅವರನ್ನು ನಗರದ ಹೊರ ವಲಯದ ಸೇಡಂ ರಸ್ತೆಯಲ್ಲಿ ಇರುವಅಮೃತ ಸರೋವರದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ್ ಹಾಗೂ ಶ್ರೀಮತಿ ಸುರೇಖಾ ಬಿ.ಜಿ.ಪಾಟೀಲ್ ಅವರು ಇಂದು ಭೇಟಿ ಮಾಡಿ ಶಿವಾನಿ ದೀದಿ ಅವರನ್ನು ಸನ್ಮಾನಿಸಿದರು. ನಂತರ ಹಲವು ವಿಷಯಗಳ ಕುರಿತು ವಿಚಾರ ವಿನಿಮಯ ಮಾಡಿದರು.