ಆಗತ್ತೂರಲ್ಲಿ ಅಂಬೇಡ್ಕರ್ ಜಯಂತಿ

02 SARAG 2
Published on

ಸರಗೂರು: ಆಗತ್ತೂರು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಬೇಡ್ಕರ್ ಅವರ ಜನ್ಮದಿನವನ್ನು ಗುರುವಾರ ಆಚರಿಸಲಾಯಿತು.


ಬಿದರಹಳ್ಳಿ ಸರ್ಕಲ್ ಬಳಿ ಇರುವ ಕಬಿನಿ ಜಲಾಶಯದ ಮುಂಭಾಗದ ನದಿಯಲ್ಲಿ ಗಂಗೆ ಪೂಜೆ ಸಲ್ಲಿಸಿ ನಂತರ ಮೆರವಣಿಗೆ ಮೂಲಕ ಅಂಬೇಡ್ಕರ್ ಪುತ್ಥಳಿಯನ್ನು ಮಂಗಳವಾದ್ಯ, ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ತರಲಾಯಿತು. ಗ್ರಾಮದ ಬೀದಿಗಳನ್ನು ರಂಗೋಲಿ, ತಳಿರು-ತೋರಣಗಳಿಂದ ಸಿಂಗರಿಸಿ ದೀಪಾಲಂಕಾರ ಮಾಡಲಾಗಿತ್ತು. ಬಿಸಿಲಿನ ತಾಪ ತಣಿಸಿಕೊಳ್ಳಲು ಮಜ್ಜಿಗೆ ವಿತರಿಸಲಾಯಿತು.


ಬಾಬಾ ಸಾಹೇಬ್ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಆಗತ್ತೂರು ಶಾಂತರಾಜ್ ಮಾತನಾಡಿ, ಅಂಬೇಡ್ಕರ್ ಅವರು ಅಸ್ಪೃಶ್ಯರಿಗಾಗಿ ಮತ್ತು ಅವರ ಸಾಮಾಜಿಕ, ಆರ್ಥಿಕ ಪ್ರಗತಿಗಾಗಿ ನಿರಂತರ ಹೋರಾಟ ಮಾಡಿದರು. ವರ್ಣ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದರು ಎಂದು ಹೇಳಿದರು.
ಸಣ್ಣಯ್ಯ, ಚೆಲುವರಾಜು, ಶಾಂತರಾಜ್, ಮಹೇಶ್, ವೈಕುಂಠ, ಕಾಂತರಾಜು, ಚಲುವರಾಜು, ಆನಂದ, ಗೋಪಾಲ್, ನಂಜಯ್ಯ, ಪ್ರವೀಣ್, ಭರತ್, ಸುನೀಲ್ ಕುಮಾರ್, ಚಂದ್ರ ಪಾಟೀಲ್, ಚಿಕ್ಕಣ್ಣ, ರಮೇಶ್, ಸಿದ್ದಯ್ಯ, ಚೆಲುವರಾಜು, ಬಸವಯ್ಯ, ಚಲುವಯ್ಯ, ಶಿವಣ್ಣ, ಶಿವಪ್ಪ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net