ಜೇವರ್ಗಿ ಅಧಿಕಾರಿಗಳಿಗೆ ಶಾಸಕ ಡಾ. ಅಜಯ್‌ ಧರ್ಮಸಿಂಗ್‌ ಖಡಕ್‌ ಸೂಚನೆ

jewargi sabhe 1
Published on
ಬಿತ್ತನೆ ಬೀಜ, ರಸಗೊಬ್ಬರ ಕೃತಕ ಅಭಾವಕ್ಕೆ ಕಾರಣರಾದಡಿವರ ವಿರುದ್ಧ ಕ್ರಮ ಕೈಗೊಳ್ಳಿ- ಜೇವರ್ಗಿ ಪಟ್ಟಣದಲ್ಲಿ ನೈರ್ಮಲ್ಯ ರಕ್ಷಣೆಗೆ ಆದ್ಯತೆ ನೀ
* ತಾಲೂಕು ಆಡಳಿತಕ್ಕೆ ಬಿಸಿ ಮುಟ್ಟಿಸಿದ ಶಾಸಕ ಡಾ. ಅಜಯ್‌ ಸಿಂಗ್‌
 *ಅಧಿಕಾರಿಗಳಿಗೆ ಶಾಸಕ ಡಾ. ಅಜಯ್‌ ಧರ್ಮಸಿಂಗ್‌ ಖಡಕ್‌ ಸೂಚನೆ
 *ಸೋರುವ ಶಾಲಾ ಕೋಣೆಗಳಿದ್ದಲ್ಲಿ ತಕ್ಷಣ ಮೇಲಾಧಿಕಾರಿಗಳಿಗೆ ಹೇಳಿ
 *ರಸ್ತೆ ಕಾಮಗಾರಿ 1 ತಿಂಗಳಲ್ಲಿ ಪೂರ್ಣ ಮಾಡಿ ವರದಿ ಕೊಡಲು ಸೀಚನೆ

ಕಲಬುರಗಿ : ಜೇವರ್ಗಿ ಪಟ್ಟಣದಲ್ಲಿ ಎಲ್ಲಾ ವಾರ್ಡ್‌ಗಳು, ಜನ ನಿಬಿಡ ಬಸ್ ನಿಲ್ದಾಣ, ಮುಖ್ಯರಸ್ತೆ, ಮಹಾಲಕ್ಷ್ಮೀ ಮಂದಿರ ಸುತ್ತಲಿನ ಪ್ರದೇಶ,. ಬಸ್ ನಿಲ್ದಾಣದ ಸುತ್ತಮುತ್ತಲಿನ ಸ್ಥಳಗಳಲ್ಲಿ ನೈರ್ಮಲ್ಯ ಸದಾಕಾಲ ಇರುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ, ಬಿತ್ತನೆ ಬೀಜ ರಸಗೊಬ್ಬರ ಕೊರತೆ ಕಾಡದಂತೆ ಹಾಗೂ ಕೃತಕ ಅಭಾವ ಹುಟ್ಟು ಹಾಕುವವರನ್ನ ಗುರಿತಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕರಾದ ಡಾ. ಅಜಯ್‌ ಸಿಂಗ್‌ ಅವರು ಇಲ್ಲಿನ ಪುರಸಬೆ ಹಾಗೂ ಕೃಷಿ ಅಧಿಕಾರಿಗಳಿಗೆ ತಾಕೀತು ಮಾಡಿದ ಪ್ರಸಂಗ ಇಂದಿಲ್ಲಿ ನಡೆದ ತಾಲೂಕು ಅಭಿವೃದ್ಧಿ ಸಭೆಯಲ್ಲಿ ನಡೆಯಿತು.

ಈಚೆಗೆ ಜೇವರ್ಗಿಯ ಕೆಲ ಪ್ರದೇಶಗಳಲ್ಲಿ ನೈಮರ್ಮಲ್ಯವಿಲ್ಲವೆಂಬ ವಿಡಿಯೋಗಳು ಕೆಲವು ವೈರಲ್‌ ಆಗಿ ಸುದ್ದಿಯಾಗಿದ್ದವು. ಇದೇ ಪ್ರಸಂಗದ ಹಿನ್ನೆಲೆಯಲ್ಲಿ ಸಾಸಕರು ಪುರಸಭೆಯ ನೈಮರ್ಮಲ್ಯ್ಯ ಕಾಪಾಡುವ ಕೆಲಸ ಕಾರ್ಯಗಳು ಇನ್ನಷ್ಟು ಚುರುಕಾಗಬೇಕು, ಕಾರ್ಮಿಕರನ್ನು ಸರಿಯಾಗಿ ಕೆಲಸಕ್ಕೆ ಪಡೆದು ಅವರಿಗೆ ಸಂಬಂಳ ಪಾವತಿಸಿ ಕೆಲಸ ಮಾಡಿಸುವಂತೆ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ರಸ್ತೆ ಡಿವೈಡರ್‌ ಮೇಲೆಲ್ಲಾ ಹೊಲಸು, ಕೊಚ್ಚೆ ಕಾಣುತ್ತಿರೋದರಿಂದ ಜನತೆ ಓಡಾಡಲು ತೊಂದರೆಯಾಗುತ್ತಿದೆ. ಹೀಗೆ ಕೊಚ್ಚೆ ಹಾಕುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳುವಂತೆಯೂ ಶಾಸಕರು ಖಡಕ್‌ ಸೂಚನೆ ರವಾನಿಸಿದ್ದಾರೆ.
ಇಂದಿನ ಸಭೆಯಲ್ಲಿ ಜೇವರ್ಗಿ ಪಟ್ಟಣ ಹಾಗೂ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿಗೆ ಸಂಬಂಧಪಟ್ಟಂತಹ 52 ವಿಷಯಗಳ ಬಗ್ಗೆ ಕಾರ್ಯಸೂಚಿ ಸಿದ್ಧಗೊಂಡಿತ್ತು. ಸೂಚಿಯಂತೆಯ ಈ ಸುದೀರ್ಘ ಸಭೆಯಲ್ಲಿ ಎಲ್ಲವನ್ನು ಚರ್ಚಿಸಲಾಯ್ತು.
ರಸಗೊಬ್ಬರ, ಬೀಜ ಕೃತಕ ಅಭಾವ ವಿರುದ್ಧ ಕ್ರಮ
ಯಡ್ರಾಮಿ ಹಾಗೂ ಜೇವರ್ಗಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ರೈತರೆಲ್ಲರೂ ಬಿತ್ತನೆಗೆ ಮುಂದಾಗಿದ್ದಾರೆ. ಅನೇಕರು ಅದಾಗಲೇ ಬಿತ್ತಿದ್ದಾರೆ. ಇದೀಗ ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಕಾಡಲೇಬಾರದು. ರಸಗೊಬ್ಬರ, ಬೀಜ ಕೃತಕ ಅಭಾವ ಸೃಷ್ಟಿಸುತ್ತಿರುವ ದೂರುಗಳಿುದ್ದು ಅಧಿಕಾರಿಗಳು ತಕ್ಷಣ ಕ್ರಮಕ್ಕೆ ಮುಂದಾಗುವಂತೆ ಹಾಗೂ ಇಂತಹ ಮೋಸದ ಆಟಗಳ ಮೇಲೆ ನಿಗಾ ವಹಿಸುವಂತೆ ಡಾ. ಅಜಯ್ ಸಿಂಗ್‌ ಸಭೆಯಲ್ಲಿ ಕೃಷಿ ಇಲಾಖೆ, ಕಂದಾಯ ಇಲಾಖೆಗೆ ಸೂಚಿಸಿದರು.
ಬೀಜ, ರಸಗೊಬ್ಬರ ನಿಗದಿತ ಬೆಲೆಗೇ ಮಾರಾಟವಾಗುವಂತೆ ನೋಡಿಕೊಳ್ಳಿ, ಕೆಲವರು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಆರೋಪಗಳಿದ್ದು ತಕ್ಷಣ ಅಗ್ರೋ ಮಳಿಗೆಗಳನ್ನು ತಪಾಸಣೆ ಮಾಡಿ ರೈತರಿಗೆ ಮೋಸವಾಗದಂತೆ ಕ್ರಮಗಳಿಗೆ ಶಾಸಕರು ಸೂಚಿಸಿದರು.
ಸೋರುವ ಶಾಲೆಗಳಿದ್ದರೆ ತಕ್ಷಣ ವರದಿ ಮಾಡಿ
ಜೇವರ್ಗಿ ಹಾಗೂ ಯಡ್ರಾಮಿಯಲ್ಲಿ ಸೋರುವ ಶಾಲೆಗಲು, ಕೋಣೆಗಳು ಕಂಡು ಬಂದಲ್ಲಿ ತಕ್ಷಣ ಶಿಕ್ಷಕರು, ಮುಖ್ಯ ಗುರುಗಳು ಅಲ್ಲಿರುವ ಅಧಿಕಾರಿಗಳಿಗೆ ಗಮನಕ್ಕೆ ತರಬೇಕು. ಯಾವುದೇ ಕಾರಣಕ್ಕೂ ಮಕ್ಕಳ ಸುರಕ್ಷತೆ ಮುಖ್ಯವೇ ಹೊರತು ಎಲ್ಲರೂ ಈ ವಿಚಾರದಲ್ಲಿ ಜವಾಬ್ದಾರಿಯಿಂದ ನಡೆಯುವಂತೆ ಶಾಸಕ ಡಾ. ಅಜಯ್‌ ಸಿಂಗ್‌ ಸೂಚಿಸಿದರು. ಕೋಣೆಗಳು ತುಂಬಾ ಸೋುವ, ಸಿಥಿಲ ಹಂತ ತಲುಪಿದ್ದಲ್ಲಿ ಅಂತಹ ಕಡೆ ಮಕ್ಕಳಿಗೆ ಕುಳ್ಳಿರಿಸಿ ಪಾಠ ಮಾಡೋದನ್ನು ಬಿಟ್ಟು ಸೂಕ್ತ, ಸುರಕ್ಷಿತ ಸ್ಥಳ ಹುಡುಕಬೇಕು. ಇದಕ್ಕೆ ಹಿರಿಯ ಅದಿಕಾರಿಗಳು, ತಾಲೂಕಿನ ಅಧಿಕಾರಿಗಳ ನೆರವು ನೀಡಬೇಕು ಎಂದರು.
ಭೀಮಾ ನದಿಗೆ ಪ್ರವಾಹ ಆತಂಕ- 40 ಹಳ್ಳಿಮೇಲೆ ನಿಗಾಕ್ಕೆ ಸೂಚನೆ
ಮಹಾರಾಷ್ಟ್ರದ ಉಜನಿ ಜಲಾಶದಿಂದ ಮತ್ತೆ 70 ಸಾವಿರ ಕ್ಯೂಸೆಕ್‌ ನೀರು ಹರಿಬಿಟ್ಟಿದ್ದಾರೆ. ಇದರಿಂದಾಗಿ ಜೇವರ್ಗಿ ತಾಲೂಕಿನಲ್ಲಿ ನದಿ ದಡದಲ್ಲಿ ಬರುವ 40 ಗ್ರಾಮಗಳಲ್ಲಿ ಸಮಸ್ಯೆ ಕಾಡುವ ಆತಂಕವಿದೆ. ತಹಶೀಲ್ದಾರರು ಹಾಗೂ ಕಂದಾಯ ಇಲಾಖೆ, ಕೃಷಿ ಇಲಾಖೆ, ಪಸು ಸಂಗೋಪನೆ ಇಲಾಖೆಯವರೆಲ್ಲರೂ ಸೇರಿಕೊಂಡು ತಂಡ ರಚಿಸಿ ನೆರೆ ಆತಂಕದ ಮೇಲೆ ನಿಗಾ ಇಡಬೇಕು. ಜನರು, ಜಾನುವಾರು ರಕ್ಷಣೆಗೆ ಮುಂದಾಗಬೇಕು ಎಂದು ಶಾಸಕರು ಸೂಚಿಸಿದ್ದಾರೆ.
 ರಸ್ತೆ ಕಾಮಗಾರಿ 
ತಾಲೂಕಿನ ಹಲ್ಳಿಗಾಡಲ್ಲಿ ಕೈಗೊಳ್ಳುವ ಸಿಸಿ ರಸ್ತೆ ಕಾಮಗಾರಿಗೆ ಅಗತ್ಯ ಮರಲು ದೊರಕಿಸುವ ಬಗ್ಗೆ ಪೊಲೀಸ್‌, ತಹಸೀಲ್ರಾದರ್‌ ಸಭೆ ನಡೆಸಲಾಗಿದ್ದು ಕಾಮಗಾರಿಗೆ ಮರಳು ಒಪೂರೈಸುವ ಸೂಚನೆ ನೀಡಲಾಗಿದೆ. ಮುಂಬರುವ 1 ತಿಂಗಳಲ್ಲಿ 61 ರಸ್ತೆ ಕಾಮಗಾರಿಗಳನ್ನು ಮಾಡಿ ಮುಗಿಸಬೇಕು ಎಂದು ಅಧಿಕಾರಗಳಿಗೆ ತಾಕೀತು ಡಾ. ಅಜಯ್‌ ಸಿಂಗ್‌ ತಾಕೀತು ಮಾಡಿದರು.
ಸಭೆಯಲ್ಲಿ ಪಿಡಬ್ಲೂಡಿ, ಪಶು ಸಂಗೋಪನೆ, ಆರೋಗ್ಯ, ಶಿಕ್ಷಣ ಹೀಗೆ ಎಲ್ಲಾ ಇಲಾಖೆಗಳ ಯೋಜನೆಗಳ ಅನುಷ್ಠಾನ, ಬಾಕಿ ಕಾಮಗಾರಿಗಳ ವಿಚಾರವಾಗಿ ಪ್ರಶ್ನೆ ಕೇಳಿ ಮಾಹಿತಿ ಪಡೆದು ಬೇಗ ಯೋಜನೆಗಳ ಅನುಷ್ಠಾನಕ್ಕೆ ಶಾಸಕ ಡಾ. ಅಜಯ್‌ ಸಿಂಗ್‌ ಸೂಚಿಸಿದರು. ಜೇವರ್ಗಿ ತಹಶೀಲ್ದಾರ್‌ ಮಲ್ಲಣ್ಣ ಯಲಗೋಡ್‌ , ಯಡ್ರಾಮಿ ತಹಶೀಲ್ದಾರ್‌, ಪುರಸಭೆ ಮುಖ್ಯಾಧಿಕಾರಿಗಳು ಸೇರಿದಂತೆ ಎಲ್ಲಾ ಇಲಾಖೆಯ ತಾಲೂಕು ಅಧಿಕಾರಿಗಳು ಸಭೆಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net