

ಕಲಬುರಗಿ : ತೊಗರಿ ಕಣಜವೆಂದೇ ಹೆಸರಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಕಾಂಡಮಚ್ಚೆ ರೋಗ, ನೆಟೆ ರೋಗ, ತೇವಾಂಶ ಕೊರತೆ ಸೇರಿದಂತೆ ವಿಚಿತ್ರ ರೋಗಗಳಿಂದಾಗಿ ಆಗಿರುವ ತೊಗರಿ ಬೆಳೆ ಹಾನಿಗೆ ಸರ್ಕಾರ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸುವ ಮೂಲಕ ನೆರವಿಗೆ ಬರಬೇಕು ಎಂದು ಕೆಕೆಆರ್‌ಡಿ ಅಧ್ಯಕ್ಷರು, ಜೇವರ್ಗಿ ಶಾಸಕರಾಗಿರುವ ಡಾ. ಅಜಯ್ ಧರ್ಮಿಸಿಂಗ್ ಅವರು ಬೆಳಗಾವಿ ಸದನದಲ್ಲಿ ಗಮನ ಸೆಳೆಯುವ ಗೊತ್ತುವಳಿ ಮಂಡಿಸಿ ವಿಷಯದ ಪ್ರಸ್ತಾವನೆ ಮಾಡಿ ಸರಕರಾದ, ಕೃಷಿ ಸಚಿವರ ಗಮನ ಸೆಳೆದಿದ್ದಾರೆ.