ಕುಳಿತಲ್ಲೇ ಇ ಖಾತಾ ಡೌನ್​ಲೋಡ್​ ಮಾಡಿ:ಹೊಸ ತಂತ್ರಜ್ಞಾನ ರೂಪಿಸಿದ ಬಿಬಿಎಂಪಿ

bbmp
Published on

ಬೆಂಗಳೂರು: ರಾಜಧಾನಿಯ ಜನರು ಇನ್ನುಮುಂದೆ ಇ-ಖಾತಾ ಪಡೆಯಲು ಕಚೇರಿಗಳಿಗೆ ಅಲೆಯುವಂತಿಲ್ಲ. ಕುಳಿತ ಜಾಗದಲ್ಲಿ ಆನ್​ಲೈನ್​ನಲ್ಲಿ ಡೌನ್​ಲೋಡ್​ ಮಾಡಿಕೊಳ್ಳುವ ವ್ಯವಸ್ಥೆಯನ್ನು ಬಿಬಿಎಂಪಿ ರೂಪಿಸಿದೆ.

ಬಿಬಿಎಂಪಿ ವಹಿಯಲ್ಲಿ ದಾಖಲಾದ "ಎ' ಮತ್ತು "ಬಿ' ಖಾತಾಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.http:// bbmpeaasthi. karnataka.gov.in  ವೆಬ್​ಸೈಟ್​ನಲ್ಲಿ 21 ಲಕ್ಷಕ್ಕೂ ಅಧಿಕ ಖಾತಾವನ್ನು ಡೌನ್​ಲೋಡ್​ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಇ-ಖಾತಾ ಪಡೆಯಲು ಕೆಲ ದಾಖಲೆಗಳು ಬೇಕಿವೆ.

ಇ-ಆಸ್ತಿ ತಂತ್ರಾಂಶದಲ್ಲಿ ಕಾವೇರಿಯಿಂದ ಪಡೆಯುವ ಕ್ರಯ ಪತ್ರ ಅಥವಾ ನೋಂದಾಯಿತ ಪತ್ರದ ಸಂಖ್ಯೆ,2024ರ ಏ.1ರಿಂದ ಈವರೆಗಿನ ಸ್ವತ್ತಿನ ಋಣಭಾರ ಪ್ರಮಾಣ ಪತ್ರ, ಹಾಗೂ ಋಣಭಾರ ಪ್ರಮಾಣ ಪತ್ರ ಸಂಖ್ಯೆ, ಆಸ್ತಿ ತೆರಿಗೆಯ 10 ಅಂಕಿ ಅರ್ಜಿ ಸಂಖ್ಯೆ, ಮಾಲೀಕರ ಆಧಾರ್​ ಗುರುತಿನ ಚೀಟಿ, ಬೆಸ್ಕಾಂನ 10 ಅಂಕಿಯ ಖಾತಾ ಸಂಖ್ಯೆ, ಆಸ್ತಿ ಭಾವಚಿತ್ರ ದಾಖಲೆ ಅಪ್​ಲೋಡ್​ ಮಾಡಬೇಕು. ಮೇಲಿನ ಎಲ್ಲ ವಿವರವನ್ನು ನಮೂದಿಸಿದ ನಂತರ ತಂತ್ರಾಂಶವು ಎಲ್ಲ ದಾಖಲೆ ಪರಿಶೀಲಿಸಿ ಸ್ವಯಂಚಾಲಿತವಾಗಿ ಇ ಖಾತಾ ನೀಡಲಿದೆ. ಇದು ಅತ್ಯಂತ ಪಾರದರ್ಶಕ ಮತ್ತು ನಾಗರಿಕ ನಿಯಂತ್ರಣದಲ್ಲಿರುವ ವ್ಯವಸ್ಥೆ ಇದಾಗಿದೆ.

ನಮೂದಿಸಿದ ಮಾಹಿತಿ ಅಪೂರ್ಣವಾಗಿದ್ದರೆ, ಬಿಬಿಎಂಪಿ ದಾಖಲೆ ಹೊಂದಿಕೆಯಾಗದಿದ್ದರೆ ಅಥವಾ ಅಂತಿಮ ಇ-ಖಾತಾ ನೀಡದಿರಲು ಯಾರಾದರೂ ಆಕ್ಷೇಪಣೆ ಸಲ್ಲಿಸಿದ್ದರೆ ಮಾತ್ರ ನಾಗರಿಕರು ಬಿಬಿಎಂಪಿಗೆ ಭೇಟಿ ನೀಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net