ಮನೆಬಾಗಿಲಿಗೆ ಅನ್ನಭಾಗ್ಯ ಯೋಜನೆ

ಗಂಗಾವತಿ ತಾಲೂಕಿನ ಗುಂತಕಲ್ ಕ್ಯಾಂಪ್‌ನ ಉಪ ಪಡಿತರ ಕೇಂದ್ರದಲ್ಲಿ ಲಾನುಭವಿಗಳಿಗೆ ಅಕ್ಕಿ ಮತ್ತು ಜೋಳ ವಿತರಿಸಲಾಯಿತು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಗ್ರಾಪಂ ಅಧ್ಯಕ್ಷ ಶಾಂತಪ್ಪ, ಸದಸ್ಯರಾದ ಮೆಹಬೂಬ್, ಸುಂಕಣ್ಣ, ಪಿ.ರಾಮಕಷ್ಣ ಇತರರಿದ್ದರು.

Published on

ಗಂಗಾವತಿ: ರಾಜ್ಯ ಸರ್ಕಾರ ಜಾರಿಗೊಳಿಸಿದ ಅನ್ನಭಾಗ್ಯ ಯೋಜನೆಯನ್ನು ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಆದ್ದರಿಂದ ಹೆಚ್ಚುವರಿ ಪಡಿತರ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.

ತಾಲೂಕಿನ ಗುಂತಕಲ್ ಕ್ಯಾಂಪ್‌ನಲ್ಲಿ ಮಂಗಳವಾರ ಉಪ ಪಡಿತರ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮದಲ್ಲಿ 130ಕ್ಕೂ ಹೆಚ್ಚು ಕುಟುಂಬಗಳಿದ್ದು, ಲಾನುಭವಿಗಳು ಪಡಿತರಕ್ಕಾಗಿ 3 ಕಿಮೀ ದೂರದ ಗ್ರಾಮಗಳಿಗೆ ಹೋಗುವ ಸ್ಥಿತಿ ಎದುರಾಗಿದೆ. ಉಪ ಪಡಿತರ ಕೇಂದ್ರಕ್ಕೆ ಹಲವು ವರ್ಷಗಳಿಂದ ಬೇಡಿಕೆಯಿತ್ತು. ಹೆಚ್ಚಾಗಿ ಬಡ ಕಾರ್ಮಿಕರೇ ಇರುವ ಕ್ಯಾಂಪ್‌ನಲ್ಲಿ ಪ್ರತ್ಯೇಕ ಪಡಿತರ ಕೇಂದ್ರ ಆರಂಭಿಸಲಾಗಿದೆ. ಜತೆಗೆ ಕುಡಿವ ನೀರು, ವಿದ್ಯುತ್, ರಸ್ತೆ ಸೇರಿ ವಿವಿಧ ಸೌಲಭ್ಯಗಳನ್ನು ನೀಡಲಾಗಿದೆ. ಹಕ್ಕುಪತ್ರ ಸಮಸ್ಯೆ, ನೀರು ಸಂಗ್ರಹ ತೊಟ್ಟಿ ನಿರ್ಮಾಣ, ವಿತರಣೆ ಕಾಲುವೆ ಕಾಂಕ್ರೀಟ್ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದರು. ನಂತರ ಪಡಿತರ ಲಾನುಭವಿಗಳಿಗೆ ಅಕ್ಕಿ ಮತ್ತು ಜೋಳ ವಿತರಿಸಲಾಯಿತು.

ಪ್ರಮುಖರಾದ ಮನ್ನೆಕಷ್ಣಮೂರ್ತಿ, ಪೊಟ್ಲೂರಿ ವೆಂಕಟೇಶ್ವರರಾವ್, ಕೆ.ನಾಗೇಶ್ವರರಾವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net