ರೈತರಿಗೆ ಮಾರಕವಾದ ಒಪ್ಪಂದ ಮಾಡಿಕೊಳ್ಳಬೇಡಿ: ರೈತ ಸಂಘಗಳು ಸಲಹೆ

rakesh tika
Published on

ಬೆಂಗಳೂರು: ರೈತರ ಸಮುದಾಯದ ಎಳಿಗೆಗೆ ಮಾರಕವಾದ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಸರ್ಕಾರಗಳು ಮಾಡಿಕೊಳ್ಳಬಾರದು ಎಂದು ಭಾರತೀಯ ರೈತ ಚಳವಳಿಗಳ ಸಮನ್ವಯ ಸಮಿತಿ (ಐಸಿಸಿಎಫ್‌ಎಂ) ಮುಖಂಡೆ ಚುಕ್ಕಿ ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.

ಗಾಂಧಿಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ಮುಕ್ತ ವ್ಯಾಪಾರ ಮತ್ತು ಕುಲಾಂತರಿ ತಳಿಗಳು’ ಹಾಗೂ ‘ಭಾರತದ ರೈತಕುಲದ ಮುಂದಿರುವ ಸವಾಲುಗಳು’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ದೇಶದ ರೈತರ ಜತೆಗೆ ಚರ್ಚಿಸದೆ ಕೇಂದ್ರ ಸರ್ಕಾರ, 85 ವಿಶ್ವ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಇವುಗಳು ರೈತರಿಗೆ ಮಾರಕವಾಗಿದೆ. ಈ ಎಲ್ಲ ಒಪ್ಪಂದಗಳು ಸಂಪೂರ್ಣ ವಿಮರ್ಶೆಯಾಗಬೇಕು. ನಂತರವೇ ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದು ಒಳಿತು ಎಂದು ಸಲಹೆ ನೀಡಿದರು. ರಾಜಸ್ಥಾನ, ಹರಿಯಾಣ, ಉತ್ತರಖಾಂಡ, ಉತ್ತರಪ್ರದೇಶ, ಕೇರಳ, ತಮಿಳುನಾಡು ಮತ್ತು ತೆಲಂಗಾಣಗಳ ರೈತ ಮುಖಂಡರುಗಳು, ಕರ್ನಾಟಕ ರಾಜ್ಯ ರೈತ ಸಂಘ, ತಮಿಳಗ ವ್ಯವಸಾಯಗಳ ಸಂಗಂ, ಕ್ಷೇತ್ಕಾರಿ ಸಂಘಟನ್, ಕೇರಳದ ತೆಂಗು ಬೆಳೆಗಾರರ ರೈತ ಸಂಘದ ಮುಖಂಡರು ಭಾಗವಹಿಸಿದ್ದರು.

ಇದಕ್ಕೂ ಮುನ್ನ ಸ್ಥಳೀಯ ಮಾರುಕಟ್ಟೆಯ ಮೇಲೆ ಅಂತಾರಾಷ್ಟ್ರೀಯ ಒಪ್ಪಂದಗಳ ಪರಿಣಾಮ ಮತ್ತು ಕುಲಾಂತರಿ ರೀತಿಯ ತಂತ್ರಜ್ಞಾನಗಳ ಕಾರಣಕ್ಕೆ ಭಾರತದ ಕೃಷಿಯ ಮೇಲಾಗುವ ಪರಿಣಾಮಗಳು, ಹವಾಮಾನ ವೈಪರೀತ್ಯದಿಂದ ಉಂಟಾಗುತ್ತಿರುವ ಬರ ಮತ್ತು ನೆರೆಗೆ ಕಾರಣಗಳು ಸೇರಿ ಇತ್ಯಾದಿ ವಿಚಾರಗಳ ಕುರಿತು ಚರ್ಚೆ ನಡೆಯಿತು. ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್, ದೆಹಲಿಯ ಸಾಮಾಜಿಕ ಹೋರಾಟಗಾರ ಯುದ್ಧವೀರ ಸಿಂಗ್, ರೈತ ಸಂಘದ ಕೆ.ಟಿ. ಗಂಗಾಧರ್ ಸೇರಿ ಇತರ ಗಣ್ಯರೂ ರೈತಗೀತೆಗೆ ಶಾಲು ಬೀಸುವುದರ ಮೂಲಕ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net