

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು ಎಂದು ಶಾಸಕ ರವಿಸುಬ್ರಹ್ಮಣ್ಯ ಸಲಹೆ ನೀಡಿದರು.
ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ನಗರದಲ್ಲಿ ಶನಿವಾರ ಸೈಬರ್ ಅಪರಾಧ ತಡೆಗಟ್ಟುವ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾವಂತರು, ಹಿರಿಯ ನಾಗರಿಕರು, ಹೆಣ್ಣಮಕ್ಕಳು ಸೈಬರ್ ಅಪರಾಧಿಗಳಿಗೆ ಗುರಿಯಾಗುತ್ತಿದ್ದಾರೆ. ಯಾವುದೇ ಬ್ಯಾಂಕಿನಲ್ಲಿ 2 ಖಾತೆ ನಿರ್ವಹಿಸಿ ಒಂದು ಖಾತೆಯಲ್ಲಿ ಕನಿಷ್ಠ ಮೊತ್ತದಲ್ಲಿ ವ್ಯವಹರಿಸಬೇಕು. ಇನ್ನೊಂದು ಖಾತೆ ವ್ಯವಹಾರದ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಬೇಕು. ಅನರಕ್ಷಸ್ಥ ವ್ಯಕ್ತಿ ಸುಲಭವಾಗಿ ಬಳಸುವ ಯುಪಿಐನ್ನು ನಮ್ಮ ದೇಶ ಪರಿಚಯಿಸಿದೆ. ವಿದೇಶಿಗರೂ ಸಹ ಇದನ್ನು ಶ್ಲಾಘಿಸಿದ್ದಾರೆ ಎಂದರು.
ಬ್ಯಾಂಕ್ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಮಾತನಾಡಿ, ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸೈಬರ್ ಅಪರಾಧಗಳನ್ನು ಪರಿಣಾಮಕಾರಿ ತಡೆಗೆ ಸರ್ಕಾರ ಪಾತ್ರ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಸೈಬರ್ ಅಪರಾಧ ವಿಭಾಗವನ್ನು ಆಧುನೀಕರಣಗೊಳಿಸಿ ಮೋಸ ಮತ್ತು ವಂಚನೆ ತಡೆಗಟ್ಟಬೇಕು. ಈ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಸಹಕಾರ ಬ್ಯಾಂಕ್ಗಳ ಡಿಜಿಟಲ್ ವ್ಯವಹಾರ ಪ್ರೋತ್ಸಾಹಿಸುವಂತೆ ಸರ್ಕಾರ ಸಹಕಾರ ನೀಡಬೇಕಿದೆ ಎಂದರು.
ಬನಶಂಕರಿ ಸೈಬರ್ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವಿಜಯ್ಹಡಗಲಿ, ಸಿಐಡಿ ಟಕದ ಉಪ ಅಧೀಕ್ಷಕ ಕೆ.ಎನ್.ಯಶವಂತ್ಕುಮಾರ್ ಸೈಬರ್ ಅಪರಾಧ ತಡೆಗೆ ಜನರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಮಾತನಾಡಿದರು. ಪಟ್ಟಣ ಸಹಕಾರ ಬ್ಯಾಂಕ್ಗಳ ಅಧ್ಯಕ್ಷರು, ಸೊಸೈಟಿಗಳ ನಿದೇಶಕರು ಮತ್ತಿತರರಿದ್ದರು.