ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ದುಡಿಮೆಗೆ ತಳ್ಳಬೇಡಿ

SRP_12-02jpj
Published on

ಶ್ರೀರಂಗಪಟ್ಟಣ: ತಾಲೂಕಿನ ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಡಿಜಿಟಲ್ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ವತಿಯಿಂದ ಬಾಲಕಾರ್ಮಿಕ ವಿರೋಧಿ ದಿನ ಆಚರಿಸಲಾಯಿತು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಗ್ರಾಪಂ ಅಧ್ಯಕ್ಷೆ ಸವಿತಾ ಜಗದೀಶ್ ಮಾತನಾಡಿ, ಕಾನೂನಿನಂತೆ ಚಿಕ್ಕ ಮಕ್ಕಳನ್ನು ದುಡಿಮೆಗೆ ದೂಡುವುದು ಅಥವಾ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಪಾಲಕರು ಆರ್ಥಿಕ ಕಾರಣಗಳಿಗಾಗಿ ಮಕ್ಕಳನ್ನು ದುಡಿಮೆಗೆ ತಳ್ಳಿ ಅವರ ಭವಿಷ್ಯ ಹಾಳು ಮಾಡಬಾರದು ಎಂದರು.


ಕಾರ್ಯದರ್ಶಿ ವೆಂಕಟರಾಮು ಮಾತನಾಡಿ, ಬಾಲಕಾರ್ಮಿಕರ ತಡೆ ನಿಯಂತ್ರಣ ಕಾಯ್ದೆ 1986 ಪ್ರಕಾರ ಉಲ್ಲಂಘನೆಯಾಗಿದ್ದರೆ ಕನಿಷ್ಠ 3 ತಿಂಗಳು ಘಟನೆಯ ಆಧಾರದ ಮೇಲೆ ಶಿಕ್ಷೆ ಪ್ರಮಾಣ ವಿಸ್ತಾರಗೊಳ್ಳುತ್ತದೆ ಎಂದು ತಿಳಿಸಿದರು.


ಲೆಕ್ಕ ಸಹಾಯಕಿ ದಿವ್ಯಾ, ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್, ಪಂಚಾಯಿತಿ ಸಿಬ್ಬಂದಿ ಅರುಣ್, ಮಹೇಶ್, ಸುಧೀರ್, ಜಗದೀಶ್, ಅರುಣ್ ಕುಮಾರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net