ಇ&-ಖಾತೆಯಲ್ಲಿ ಲೋಪವಾಗದಿರಲಿ

Published on

ಗೌರಿಬಿದನೂರು: ಇ-ಖಾತೆ ವಿತರಣೆ ಯಲ್ಲಿ ಲೋಪ ದೋಷವಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಕೆ.ಎಚ್​.ಪುಟ್ಟಸ್ವಾಮಿ ಗೌಡ ಎಚ್ಚರಿಸಿದರು.

ಗೌರಿಬಿದನೂರಿನ ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ಇ&ಖಾತೆ ಆಂದೋಲನದಲ್ಲಿ ಅರ್ಜಿದಾರರಿಗೆ ಖಾತೆ ವಿತರಿಸಿ ಮಾತನಾಡಿ, ಜನರಿಗೆ ತೊಂದರೆಯಾಗದಂತೆ, ತ್ವರಿತವಾಗಿ ಖಾತೆಗಳು ದೊರೆಯಬೇಕು ಎಂಬ ದೃಷ್ಟಿಯಿಂದ ಪ್ರತಿ ವಾರ ಇ-&ಖಾತೆ ವಿತರಣೆ ಆಂದೋಲನ ಮಾಡಲಾಗುತ್ತಿದೆ. ಅರ್ಜಿಸಲ್ಲಿಸಿದ ತಿಂಗಳ ಒಳಗೆ ಖಾತೆ ವಿತರಿಸಲಾಗುತ್ತಿದೆ. ಆದರೆ ಸಣ್ಣ ಪುಟ್ಟ ತಿದ್ದುಪಡಿ ದೋಷಗಳು ಬರುತ್ತಿವೆ ಎಂಬ ಮಾಹಿತಿ ಬಂದಿದೆ. ಯಾವುದೇ ಕಾರಣಕ್ಕೂ ಲೋಪದೋಷಗಳನ್ನು ಎಸಗದೆ ತಿದ್ದುಪಡಿಗೆ ಅವಕಾಶವಿಲ್ಲದೆ ಖಾತೆ ವಿತರಿಸಲು ಪ್ರಯತ್ನಿಸಬೇಕು ಎಂದರು.

ನಗರಸಭೆ ಅಧ್ಯಕ್ಷ ಲಕ್ಷಿ$್ಮನಾರಾಯಣಪ್ಪ ಮಾತನಾಡಿ, ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ವೇಗಕ್ಕೆ ತಕ್ಕಂತೆ ಅಭಿವೃದ್ಧಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಮನೆ ಮನೆ ಕಸ ಸಂಗ್ರಹಕ್ಕೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಮನೆಯಲ್ಲಿ ಸಂಗ್ರಹವಾಗುವ ಕಸ ಹೊರಗಡೆ ಎಸೆಯದೆ ನಗರಸಭೆ ನಿಗದಿಪಡಿಸಿರುವ

ವಾಹನಗಳಿಗೆ ನೀಡಬೇಕು ಎಂದರು.

ಇಂದಿನ ಖಾತಾ ಅದಾಲತ್​ನಲ್ಲಿ 220 ಫಲಾನುಭವಿಗಳಿಗೆ ಇ&-ಖಾತೆ ವಿತರಿಸಲಾಯಿತು. ಪೌರಾಯುಕ್ತ ಕೆ.ಜೆ.ರಮೇಶ್​ ಮಾತನಾಡಿ, ನಗರದ ಸ್ವಚ್ಛತೆ, ಸೌಂದರ್ಯ ಕಾಪಾಡಲು ನಗರಸಭೆಯೊಂದಿಗೆ ನಾಗರಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಉಪಾಧ್ಯಕ್ಷ ಫರೀದ್​, ಸದಸ್ಯರಾದ, ಡಿ.ಜೆ.ಚಂದ್ರಮೋಹನ್​, ಡಿ.ಎ.ಮಂಜುಳಾ, ಗೋಪಾಲ್​, ರಾಜಕುಮಾರ್​, ಜಯರಾಮ್​, ಕಂದಾಯ ನಿರೀಕ್ಷಕ

ಸಂಜೀವ್​ ಕುಮಾರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net