ಅಪ್ರಾಪ್ತರಿಗೆ ವಾಹನಗಳನ್ನು ನೀಡದಿರಿ

18-kkr1(6-24
Published on

ಕಿಕ್ಕೇರಿ: ಮಳೆಗಾಲದಲ್ಲಿ ಬಹುತೇಕ ಕಳವು ಪ್ರಕರಣಗಳು ಹೆಚ್ಚು ನಡೆಯಲಿದ್ದು ಜಾಗ್ರತೆಯಿಂದ ಇರಬೇಕು ಎಂದು ಕಿಕ್ಕೇರಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರೇವತಿ ತಿಳಿಸಿದರು.


ಹೋಬಳಿಯ ಆನೆಗೊಳ ಗ್ರಾಮದಲ್ಲಿ ಸೋಮವಾರ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ರೈತರು ಮನೆಗಳಿಗೆ ಬಾಗಿಲು ಹಾಕಿಕೊಂಡು ಹೊಲಗದ್ದೆಗಳಿಗೆ ತೆರಳುವಾಗ ಎಚ್ಚರಿಕೆ ವಹಿಸಿ. ಮನೆಯ ಬಾಗಿಲು, ತೊಲೆಗಳ ಮೇಲೆ ಬೀಗದ ಕೀ ಇಟ್ಟು ಹೋಗಬೇಡಿ. ಹೊರಗೆ ಹೋಗುವಾಗ ಅಕ್ಕ ಪಕ್ಕದವರಿಗೆ ಮಾಹಿತಿ ನೀಡಿ. ಅನುಮಾನಸ್ಪದ ವ್ಯಕ್ತಿಗಳು ಕಂಡಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಎಂದರು.


ರಾತ್ರಿ ವೇಳೆ ಬಯಲಿನಲ್ಲಿ ಜಾನುವಾರಗಳನ್ನು ಕಟ್ಟು ಹಾಕಬೇಡಿ. ಅಂಗಡಿ-ಮುಂಗಟ್ಟುಗಳ ಮುಂದೆ ಗುಣಮಟ್ಟದ ಸಿಸಿ ಕ್ಯಾಮರಾ ಅಳವಡಿಸಿ. ರಸ್ತೆ ಸುರಕ್ಷತಾ ನಿಯಮ ಪಾಲಿಸಿ. ಅಪ್ರಾಪ್ತರಿಗೆ ಯಾವುದೇ ಕಾರಣಕ್ಕೂ ವಾಹನಗಳನ್ನು ನೀಡದಿರಿ. ಅವಘಡ ಸಂಭವಿಸಿದರೆ ಮಕ್ಕಳ ಜತೆ ಪಾಲಕರಿಗೂ ದಂಡ, ಶಿಕ್ಷೆ ಇದೆ. ಬಾಲ್ಯವಿವಾಹ, ಮದ್ಯ ಅಕ್ರಮ ಮಾರಾಟದಂತಹ ಮಾಹಿತಿ ಇದ್ದಲ್ಲಿ ತಿಳಿಸಿ. ಸಮಸ್ಯೆಗಳಿದ್ದಲ್ಲಿ ರಕ್ಷಣೆಗೆ ಪೊಲೀಸ್ ಇಲಾಖೆ ಇದೆ. ಮಧ್ಯವರ್ತಿಗಳನ್ನು ಅವಲಂಬಿಸದೆ ನೇರವಾಗಿ ಪೊಲೀಸ್ ಠಾಣೆಗೆ ಬನ್ನಿ ಎಂದು ಹೇಳಿದರು.


ಮಂಜುನಾಥ್, ರಮೇಶ್, ರಾಮೇಗೌಡ, ಸುತ್ತ್ತಲ ಗ್ರಾಮಗಳ ಸಾರ್ವಜನಿಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net