ವಿದ್ಯುತ್ ಕಂಪನಿಗಳಿಗೆ ಭೂಮಿ ನೀಡಬೇಡಿ

ಅಳವಂಡಿ ಗ್ರಾಮದಲ್ಲಿ ಪ್ರವಾಸಿ ಮಂದಿರದ ಕಟ್ಟಡಕ್ಕೆ ಕಾಮಗಾರಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಭೂಮಿಪೂಜೆ ನೆರವೇರಿಸಿದರು. ಮಾಜಿ ಸಂಸದ ಸಂಗಣ್ಣ ಕರಡಿ, ಡಿಎಚ್‌ಒ ಲಿಂಗರಾಜ, ತಹಸೀಲ್ದಾರ್ ವಿಠ್ಠಲ ಚೌಗಲೆ, ಇಒ ದುಂಡೇಶ, ಎಇಇ ವೆಂಕಟೇಶ, ಎಡಿಎ ಜೀವನಸಾಬ್, ಪಿಎಸ್‌ಐ ಪ್ರಲ್ಹಾದ ನಾಯಕ ಇತರರಿದ್ದರು.
ಅಳವಂಡಿ ಗ್ರಾಮದಲ್ಲಿ ಪ್ರವಾಸಿ ಮಂದಿರದ ಕಟ್ಟಡಕ್ಕೆ ಕಾಮಗಾರಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಭೂಮಿಪೂಜೆ ನೆರವೇರಿಸಿದರು. ಮಾಜಿ ಸಂಸದ ಸಂಗಣ್ಣ ಕರಡಿ, ಡಿಎಚ್‌ಒ ಲಿಂಗರಾಜ, ತಹಸೀಲ್ದಾರ್ ವಿಠ್ಠಲ ಚೌಗಲೆ, ಇಒ ದುಂಡೇಶ, ಎಇಇ ವೆಂಕಟೇಶ, ಎಡಿಎ ಜೀವನಸಾಬ್, ಪಿಎಸ್‌ಐ ಪ್ರಲ್ಹಾದ ನಾಯಕ ಇತರರಿದ್ದರು.
Published on

ಅಳವಂಡಿ: ಶಿಂಗಟಾಲೂರು ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ ರೈತರ ಜಮೀನಿಗೆ ನೀರು ಹರಿಸಲಾಗುವುದು. ಇದರಿಂದ 16 ಸಾವಿರ ಹೆಕ್ಟೆರ್ ಭೂಮಿ ನೀರಾವರಿಯಾಗಲಿದ್ದು, ಭೂಮಿಗಳನ್ನ ಪವನ ಹಾಗೂ ಸೋಲಾರ್ ವಿದ್ಯುತ್ ಉತ್ಪಾದನೆ ಕಂಪನಿಗಳಿಗೆ ನೀಡಬಾರದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಎಸ್‌ಡಿಪಿ ಅಭಿವೃದ್ಧಿ ಯೋಜನೆಯಡಿ ಶನಿವಾರ ಹಮ್ಮಿಕೊಂಡಿದ್ದ 180ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಬೆಡ್ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಕೊಳ್ಳಲಾಗುವುದು. ಪಶು ಆಸ್ಪತ್ರೆಗೆ ನೂತನ ಕಟ್ಟಡಕ್ಕೆ 48 ಲಕ್ಷ ರೂ. ಮಂಜೂರಾಗಿದ್ದು, ವೈದ್ಯರನ್ನು ನೇಮಿಸಲು ಪ್ರಯತ್ನಿಸುವೆ. ಶಿಂಗಟಾಲೂರು ಏತ ನೀರಾವರಿ ಯೋಜನೆಗೆ ಮಧ್ಯಪ್ರದೇಶ ಮಾದರಿಯಲ್ಲಿ 530 ಕೋಟಿ ರೂ. ಜಾರಿಗೊಳಿಸಲು ಟೆಂಡರ್ ಕರೆಯಲಾಗುವುದು. ನೀರಾವರಿ ಯೋಜನೆಯಿಂದ ರೈತರಿಗೆ ಅನೂಕೂಲವಾಗಲಿದೆ. ಕೊಪ್ಪಳ-ಮುಂಡರಗಿ ರಸ್ತೆ ಅಭಿವೃದ್ಧಿಗೆ 256 ಕೋಟಿ ರೂ. ಮಂಜೂರಾಗಿದ್ದು, ಚತುಸ್ಪಥ (ನಾಲ್ಕು ಪಥ)ರಸ್ತೆಯನ್ನಾಗಿ ನಿರ್ಮಿಸಲಾಗುವುದು. ಅಳವಂಡಿ ವಲಯದ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಕೊಳ್ಳಲಾಗಿದೆ. ಜಿಲ್ಲಾ ನ್ಯಾಯಲಯ ಸಂಕೀರ್ಣಕ್ಕೆ 50 ಕೋಟಿ ರೂ. ಮಂಜೂರಾಗಿದೆ. ಒಟ್ಟಾರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಕೊಳ್ಳಲಾಗುವುದು ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಬಡವರು ಬದುಕು ಕಟ್ಟಿಕೊಳ್ಳುವಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ನೆರವಾಗಿವೆ. ಈ ಭಾಗದ ನೀರಾವರಿ ಯೋಜನೆ ರೈತರ ಕನಸಾಗಿದೆ. ಆದ್ದರಿಂದ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ. ರೈತರು ಭೂಮಿಯನ್ನು ವಿವಿಧ ಕಂಪನಿಗಳಿಗೆ ನೀಡಬಾರದು. ನೀರಾವರಿ ಪ್ರದೇಶದಲ್ಲಿ ವಿವಿಧ ತೋಟಗಾರಿಕೆ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಬೇಕು. ಶಾಸಕರು ಅಭಿವೃದ್ಧಿಯ ಹರಿಕಾರವಾಗಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಅಳವಂಡಿಯಲ್ಲಿ ಪ್ರವಾಸಿ ಮಂದಿರ, ನಿಲೋಗಿಪುರ ರಸ್ತೆ ಅಭಿವೃದ್ಧಿ, ಶ್ರೀಕೃಷ್ಣ ದೇವಸ್ಥಾನ ಜಿರ್ಣೋದ್ದಾರ ಸೇರಿ ಒಟ್ಟು 6.39 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು. ಗುಡಗೇರಿ-ಹಳ್ಳಿಕೇರಿ ರಸ್ತೆ 3.55 ಕೋಟಿ ರೂ., ಎಕಲಾಸಪುರ ರಸ್ತೆ 6.34 ಕೋಟಿ ರೂ., ಮುರ್ಲಾಪುರದಲ್ಲಿ ಸಿಸಿ ರಸ್ತೆ ಹಾಗೂ ಹೈಮಾಸ್ಕ್ ಅಳವಡಿಕೆಗೆ 50 ಲಕ್ಷ ರೂ., ಘಟ್ಟಿರಡ್ಡಿಹಾಳ-ಅಳವಂಡಿ ರಸ್ತೆ ಸೇತುವೆ 2.62 ಕೋಟಿ ರೂ., ಅಳವಂಡಿ-ಘಟ್ಟಿರಡ್ಡಿಹಾಳ ರಸ್ತೆ ಅಭಿವೃದ್ಧಿ 4.60 ಕೋಟಿ ರೂ., ಹೈದರನಗರ ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಹೈಮಾಸ್ಕ್ ಅಳವಡಿಕೆ 50 ಲಕ್ಷ ರೂ.ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಡಿಎಚ್‌ಒ ಲಿಂಗರಾಜ, ತಹಸೀಲ್ದಾರ್ ವಿಠ್ಠಲ ಚೌಗಲೆ, ಇಒ ದುಂಡೇಶ, ಎಇಇ ವೆಂಕಟೇಶ, ಎಡಿಎ ಜೀವನಸಾಬ್, ಪಿಎಸ್‌ಐ ಪ್ರಲ್ಹಾದ ನಾಯಕ, ಪ್ರಮುಖರಾದ ಎಸ್.ಬಿ.ನಾಗರಳ್ಳಿ, ಟಿ.ಬಾಲಚಂದ್ರ, ಹನುಮರೆಡ್ಡಿ ಹಂಗನಕಟ್ಟಿ, ಭರಮಪ್ಪ ನಗರ, ಗಾಳೆಪ್ಪ ಪೂಜಾರ, ಚೌಡಪ್ಪ ಜಂತ್ಲಿ, ಅರವಿಂದಪ್ಪ, ಸುರೇಶ ದಾಸರಡ್ಡಿ, ಬೀಮೇಶಪ್ಪ, ರಾಮನಗೌಡ, ಅನ್ವರ ಗಡಾದ, ಮಂಜುನಾಥ, ತೋಟಪ್ಪ, ಗುರುಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net