ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ

5 AVLAVND 04
ಅಳವಂಡಿಯಲ್ಲಿ ಆಯೋಜಿಸಿದ್ದ ಸಾಮಾಜಿಕ ಪರಿಶೋಧನಾ ಗ್ರಾಮಸಭೆ ಉದ್ದೇಶಿಸಿ ಸಾಮಾಜಿಕ ಪರಿಶೋಧನಾ ಘಟಕದ ವ್ಯವಸ್ಥಾಪಕ ಶರಣಬಸವ ನಾಯಕ ಮಾತನಾಡಿದರು. ಪ್ರಮುಖರಾದ ರುದ್ರಗೌಡ, ಬಸವರಾಜ, ಗೀತಾ, ದಾವಲಸಾಬ, ದೇವೇಂದ್ರರಡ್ಡಿ, ಸುರೇಶ ಇತರರಿದ್ದರು.ವಿನಯ, ಆತ್ಮಹತ್ಯೆ, ನ್ಯಾಯಾಂಗ, ತನಿಖೆಯಾಗಲಿ,Vinaya, suicide, judicial, investigation,
Published on

ಅಳವಂಡಿ: ಸರ್ಕಾರದಿಂದ ಅನುಷ್ಠಾನಗೊಂಡ ಕಾಮಗಾರಿಗಳಲ್ಲಿ ಸಾರ್ವಜನಿಕರೊಡನೆ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ಕಂಡುಕೊಳ್ಳಲು ಸಾಮಾಜಿಕ ಪರಿಶೋಧನಾ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಯಲಬುರ್ಗಾದ ಸಾಮಾಜಿಕ ಪರಿಶೋಧನಾ ಘಟಕದ ವ್ಯವಸ್ಥಾಪಕ ಶರಣಬಸವ ನಾಯಕ ತಿಳಿಸಿದರು.

ನರೇಗಾದಡಿ ಗ್ರಾಮದ ಗುಗ್ರಿಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರು ಹಾಗೂ ಸಾರ್ವಜನಿಕರೊಂದಿಗೆ ನಡೆದ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯಲ್ಲಿ ಶನಿವಾರ ಮಾತನಾಡಿದರು.

ನರೇಗಾ ಹಾಗೂ 15ನೇ ಹಣಕಾಸು ಯೋಜನೆಯಡಿ ನಡೆದ ಕಾಮಗಾರಿಗಳ ಅನುಷ್ಠಾನ ಕುರಿತು ಚರ್ಚೆ ನಡೆಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಅಳವಂಡಿಯಿಂದ 2023-24ನೇ ಸಾಲಿನಲ್ಲಿ ಒಟ್ಟು 2,54,92,724 ರೂ. ಹಾಗೂ 15ನೇ ಹಣಕಾಸು ಯೋಜನೆಯಡಿ 9,92,667 ರೂ. ವಿವಿಧ ಕಾಮಗಾರಿಗೆ ವ್ಯಯಿಸಲಾಗಿದೆ. ಇದರಲ್ಲಿ ಕೂಲಿ ಹಣ 2,19,88,558 ರೂ. ಸಾಮಗ್ರಿ ಹಣ 35,04,166 ರೂ. ವ್ಯಯಿಸಲಾಗಿದೆ.

ಈ ಕಾಮಗಾರಿಯಲ್ಲಿ 2 ಕಾಂಪೌಂಡ್, 32 ಮನೆ, 11 ಬದು, ದನದದೊಡ್ಡಿ, 2 ಸ್ಮಶಾನ ಅಭಿವೃದ್ಧಿ, 1 ಶೌಚಗೃಹ, 1 ನಾಲೆ, 29 ಕೆರೆ, 10 ಚೆಕ್‌ಡ್ಯಾಂ, 1 ಬೋರ್‌ವೆಲ್ ರೀಚಾರ್ಜ್, 3 ಮೇಕೆ ಶೆಡ್, 5 ಅರಣ್ಯ, 3 ತೋಟಗಾರಿಕೆ ಒಟ್ಟು 100 ಕಾಮಗಾರಿ ಕೈಕೊಳ್ಳಲಾಗಿದೆ ಎಂದರು.

ಕಾರ್ಯದರ್ಶಿ ಬಸವರಾಜ, ಬಿಎ್ಟಿ ದಾವಲಸಾಬ, ಸಿಬ್ಬಂದಿ ದೇವೇಂದ್ರರಡ್ಡಿ, ಗೀತಾ, ಮಾರುತಿ ಹಾಗೂ ಕೂಲಿ ಕಾರ್ಮಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net