ಎಲ್ಲದರಲ್ಲೂ ರಾಜಕೀಯ ಸರಿಯಲ್ಲ

Published on


ಕಲಬುರಗಿ : ಎಲ್ಲದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ, ಅದರಲ್ಲೂ ದೇಶದ ಹೆಸರಿನಲ್ಲಿ ಮಾಡುವುದು ಇನ್ನೂ ಒಳ್ಳೆಯದಲ್ಲ ಎನ್ನುವ ಮೂಲಕ ಕೇಂದ್ರ ಸರ್ಕಾರದ  ನಡೆಗೆ  ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ವಿರೋಧ ವ್ಯಕ್ತಪಡಿಸಿದರು.
ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಇಂಡಿಯಾ ಎಂದು ಹೆಸರಿಟ್ಟುಕೊಂಡಿದ್ದರಿAದ  ಆ ಹೆಸರನ್ನೇ ಬದಲಾಯಿಸಲು ಹೊರಟಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಪ್ರೆಸಿಡೆಂಟ್ ಆಫ್ ಇಂಡಿಯಾ ಎಂಬ ಹೆಸರು ಹೇಳಲು ಚಂದ ಎನಿಸುತ್ತದೆ ಎಂದು ಪತ್ರಕರ್ತರಿಗೆತಿಳಿಸಿದರು.
ದೇಶದ ಹೆಸರಿನಲ್ಲಿಯೂ ರಾಜಕೀಯ ಮಾಡುವುದು ಸಲ್ಲದು. ನಾವು ಭಾರತೀಯರು ಎನ್ನುವುದು ಎಲ್ಲರಿಗೂ ಹೆಮ್ಮೆಯಾಗಿದೆ. ಇಂಡಿಯಾ ಎಂಬ ಹೆಸರು ಎಲ್ಲಡೆ ಜನಜನಿತವಾಗಿದೆ. ಭಾರತವೂ ನಮ್ಮದೆ, ಹಿಂದುಸ್ತಾನ ನಮ್ಮದೆ ಎಂಬಹುದು ಎಲ್ಲರಿಗೂ ಗೊತ್ತಿದೆ ಎಂದರು.
ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿರುವುದು ಅವರ ವಯಕ್ತಿಯ ಅಭಿಪ್ರಾಯವಾಗಿದೆ. ಅದಕ್ಕೂ ನಮ್ಮ ಪಕ್ಷಕ್ಕೂ ಮತ್ತು ಇಂಡಿಯಾ ಮೈತ್ರಿಕೂಟಕ್ಕೂ ಸಂಬAಧವಿಲ್ಲ. ಭಾರತ ಸರ್ವಧರ್ಮಗಳ ಶಾಂತಿಯ ತೋಟವಾಗಿದೆ. ಸಂವಿಧಾನದ ಆಶಯ ಪಾಲಿಸಿಕೊಂಡು ಹೋಗುವುದು ಎಲ್ಲರ ಕರ್ತವ್ಯವಾಗಿದೆ ಎಂದು ಡಾ.ಅಜಯಸಿಂಗ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net