ನೂತನನಗರ ಶಿಶುಪಾಲನಾ ಕೇಂದ್ರ ಮುಚ್ಚಬೇಡಿ

07 ylp 02 (manavi) MLA HEBBAR
Published on

ಯಲ್ಲಾಪುರ: ಕಾರ್ವಿುಕ ಇಲಾಖೆಯ ಅಡಿಯಲ್ಲಿನ ಕಾರ್ವಿುಕ ಕಲ್ಯಾಣ ಮಂಡಳಿಯಿಂದ ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಶಿಶುಪಾಲನಾ ಕೇಂದ್ರಗಳನ್ನು ಮುಚ್ಚಬಾರದೆಂದು ಆಗ್ರಹಿಸಿ ನೂತನನಗರ ಶಿಶುಪಾಲನಾ ಕೇಂದ್ರದ ಪ್ರಮುಖರು ಶಾಸಕ ಶಿವರಾಮ ಹೆಬ್ಬಾರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಸರ್ಕಾರ ಶಿಶುಪಾಲನಾ ಕೇಂದ್ರಗಳನ್ನು ಮುಚ್ಚುತ್ತದೆ ಎಂಬ ವದಂತಿ ಇದ್ದು, ಅಂತಹ ನಿರ್ಧಾರ ಕೈಗೊಳ್ಳಬಾರದು. ಸರ್ಕಾರ ಹೆಚ್ಚಿನ ಅನುದಾನ ನೀಡಿ ಕೇಂದ್ರವನ್ನು ಮುನ್ನೆಡೆಸಿಕೊಂಡು ಹೋಗಲು ಸಹಕರಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸರ್ಕಾರದ ಮಟ್ಟದಲ್ಲಿ ಈ ವಿಷಯ ರ್ಚಚಿಸಿ ಕ್ರಮಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕೇಂದ್ರದ ಪ್ರಮುಖರಾದ ಸಂಜನಾ ಮಾರಾಠಿ, ಶೈನಬಿ ಸಿದ್ದಿ, ಶ್ಯಾಮಲಾ ಬನ್ಸೋಡೆ, ತಬಸುಮ್ ಸಾವಿತ್ರಿ ಜವಳಿ, ಮೀರಾಸಾಬ್ ಮುಲ್ಲಾ, ಅಬ್ದುಲ್ ಖಾದರ್, ಅಲ್ತಾಫ್ ಶೇಖ್, ಮಹಮ್ಮದ್ ದರ್ಗಾ, ರಾಜೇಶ ಭಟ್, ಸುರೇಶ ಮಡಿವಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net