ಮಾದಕ ವಸ್ತುಗಳ ವ್ಯಸನಿಗಳಾಗಬೇಡಿ : ಎಸ್ಪಿ ಶ್ರೀನಿವಾಸಗೌಡ

Drug
Published on

ರಾಮನಗರ: ಮತ್ತು ಬರುವ ಪದಾರ್ಥಗಳ ಸೇವೆ ಮನುಷ್ಯನ ಮೇಲೆ ಅನೇಕ ರೀತಿಯ ದುಷ್ಪರಿಣಾಮಗಳನ್ನು ಉಂಟು ಮಾಡುವ ಜೊತೆಗೆ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ. ಇದರ ಬಗ್ಗೆ ಅರಿವಿದ್ದರೂ ಸಹ ಕೆಲವರು ಇದನ್ನು ಚಟವಾಗಿ ತೆಗೆದುಕೊಂಡಿದ್ದಾರೆ. ಮಾದಕ ವಸ್ತುಗಳಿಂದ ಸಮಾಜವನ್ನು ಮುಕ್ತವಾಗಿಸಲು ಪ್ರತಿಯೊಬ್ಬರೂ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಎಸ್ಪಿ ಶ್ರೀನಿವಾಸ್ ಗೌಡ ಹೇಳಿದರು.

ಹಾರೋಹಳ್ಳಿಯ ದಯಾನಂದ ಸಾಗರ ಮೆಡಿಕಲ್ ಕಾಲೇಜಿನಲ್ಲಿ ಗುರುವಾರ ನಡೆದ ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿಶ್ವದಾದ್ಯಂತ ದುಶ್ಚಟಗಳಿಗೆ ಮಕ್ಕಳು ಮತ್ತು ಯುವಕರು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಸರ್ಕಾರವು ಸಹ ಇದನ್ನು ಬುಡಸಮೇತ ಕಿತ್ತು ಹಾಕುವ ನಿಟ್ಟಿನಲ್ಲಿ ಕಾರ್ಯ ನಿರತವಾಗಿದೆ. ನಮ್ಮ ಇಲಾಖೆಯೂ ಸಹ ಅವಿರತವಾಗಿ ಪ್ರಯತ್ನಿಸುತ್ತಿದೆ. ವಿದ್ಯಾರ್ಥಿಗಳು ಮಾದಕ ವಸ್ತುಗಳ ಮಾರಾಟ, ಸಾಗಾಟ ಕಂಡು ಬಂದರೆ ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದರು.

ಇನ್ನು ಮಾದಕ ವಸ್ತುಗಳ ವ್ಯಸನ ಯುವ ಜನತೆಯ ದುಷ್ಪರಿಣಾಮ ಬೀರುತ್ತಿದೆ. ಸಂತೋಷ,ಗೆಳೆಯರ ಒತ್ತಡ,ನೋವು ನಿವಾರಣೆಯ ನೆಪ,ಆಧುನಿಕ ಜೀವನ ಶೈಲಿ, ಅನುಕರಣೆ ಮಾಡಲು ವ್ಯಸನಕ್ಕೆ ಹಲವರು ತುತ್ತಾಗುತ್ತಿದ್ದಾರೆ. ಇದರಿಂದ ಹಿಂಸಾತ್ಮಕ ನಡವಳಿಕೆ,ಉದ್ಯೋಗ ಮತ್ತು ಕೌಟುಂಬಿಕ ಸಮಸ್ಯೆಗಳು ಆತ್ಮಹತ್ಯೆ, ಕಾನೂನು ಬಾಹಿರ ಕೃತ್ಯಗಳು ದೈಹಿಕ,ಮಾನಸಿಕ ಕಾಯಿಲೆಗಳು ರಸ್ತೆ ಅಪಘಾತಗಳೂ ಸಹ ಸಂಭವಿಸುತ್ತವೆ ಹೀಗಗಿ ಎಲ್ಲರೂ ಈ ರೀತಿಯ ವಸ್ತುಗಳಿಂದ ದೂರವಿರಬೇಕು ಎಂದು ವಿದ್ಯಾರ್ಥಿಗಳಲ್ಲಿ ಅಅರಿವು ಮೂಡಿಸುವ ಕೆಲಸ ಮಾಡಿದರು.

ಕಾರ್ಯಕ್ರಮದಲ್ಲಿ ದಯಾನಂದ ಸಾಗರ್ ಕಾಲೇಜಿನ ಅಶೋಕ್, ಡಿವೈಎಸ್ಪಿ ಶ್ರೀನಿವಾಸ್, ಇನ್ಸ್‌ಪೆಕ್ಟರ್ ಅರ್ಜುನ್, ಸಿಬ್ಬಂದಿ ಶಿವರಾಜು, ಫೈರೋಜ್ ಪಾಷಾ, ಮಣಿಕಂಠ ಸೇರಿದಂತೆ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net