

ಮಂಚೇನಹಳ್ಳಿ: ಇಲ್ಲಿನ ವಿವಿಧ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೋಮವಾರ ಅನಿರೀತ ಭೇಟಿ ನೀಡಿ ಪರಿಶೀಲಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಬಯೋಮೆಟ್ರಿಕ್ ಹಾಜರಾತಿ, ವಿದ್ಯಾರ್ಥಿನಿಯರಿಗೆ ಸಿಗುತ್ತಿರುವ ಸವಲತ್ತುಗಳು, ಕಲಿಕಾ ವ್ಯವಸ್ಥೆ ಸೇರಿ ವಿವಿಧ ವಿಚಾರಗಳ ಮಾಹಿತಿ ಪಡೆದುಕೊಂಡರು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ನಡುವಿನ ಹೇಳಿಕೆಗಳನ್ನು ವಿರ್ಮಶಿಸಿ ಸಲಹೆ ಸೂಚನೆಗಳನ್ನು ನೀಡಿದರು. ಇದೇ ವೇಳೆ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟವನ್ನು ಸೇವಿಸಿ, ಆಹಾರದ ಗುಣಮಟ್ಟ ಪರಿಶೀಲಿಸಿದರು.
ಉಜ್ವಲ ಜೀವನ ರೂಪಿಸಿಕೊಳ್ಳಲು ಶ್ರದ್ಧೆಯಿಂದ ವ್ಯಾಸಂಗ ಮಾಡಬೇಕು. ನಿಗದಿತ ಗುರಿ ಸಾಧನೆಗೆ ಪ್ರಾಮಾಣಿಕ ಪರಿಶ್ರಮ ಅತ್ಯಗತ್ಯ. ಸಮಯದ ಹರಣವು, ಕಲಿಕೆಯಲ್ಲಿ ಅಸಡ್ಡೆಯು ಅನುಕೂಲಕರ ಅವಕಾಶಗಳಿಂದ ವಂಚಿತರನ್ನಾಗಿಸುತ್ತದೆ. ಇದರ ಅರಿವನ್ನು ಹೊಂದಿರಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ ಓದಲು ನಿರೀೆಯ ಅವಕಾಶಗಳು ಹೆಚ್ಚಿಗೆ ಸಿಗುತ್ತಿರಲಿಲ್ಲ. ಆದರೆ, ಈಗ ಮಕ್ಕಳ ಶೈಣಿಕ ಪ್ರಗತಿಯ ಹಿತದೃಷ್ಟಿಯಿಂದ ವಸತಿ, ಊಟ, ಕಲಿಕೋಪಕರಣಗಳು, ಪೋತ್ಸಾಹ ಧನ ಮತ್ತು ನುರಿತ ಮಾರ್ಗದರ್ಶನದ ವ್ಯವಸ್ಥೆ ಸೇರಿ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಇವುಗಳನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕು. ಉನ್ನತ ವಿದ್ಯಾಭ್ಯಾಸದ ಮೂಲಕ ದೊಡ್ಡ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಸಲಹೆ ನೀಡಿದರು.
ಆಹಾರ ಕಿಟ್ ವಿತರಣೆ ಬಾಕಿ
ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಕೆಲ ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಕಿಟ್ಗಳನ್ನು ವಿತರಿಸದಿರುವುದರ ಬಗ್ಗೆ ಜಿಲ್ಲಾಧಿಕಾರಿಗಳು ಬೇಸರಿಸಿದರು. ತಾಯಿ ಹಾಗೂ ಮಗುವಿನ ಆರೋಗ್ಯದ ಹಿತದೃಷ್ಟಿಯಿಂದ ಕೇಂದ್ರಗಳಿಗೆ ಆಹಾರದ ಕಿಟ್ಗಳನ್ನು ಪೂರೈಸಲಾಗುತ್ತಿದೆ. ಇವುಗಳನ್ನು ಸರ್ಮಪಕವಾಗಿ ಫಲಾನುಭವಿಗಳಿಗೆ ವಿತರಿಸಬೇಕು.ಆಗ ಮಾತ್ರ ಯೋಜನೆ ಜಾರಿಗೆ ಸಾರ್ಥಕತೆ ಬರುತ್ತದೆ. ಒಂದೇ ದಿನದಲ್ಲಿ ಕೇಂದ್ರಗಳಿಗೆ ಗರ್ಭಿಣಿಯರನ್ನು ಕರೆಸಿಕೊಂಡು ನಿಯಮಾನುಸಾರ ಕಿಟ್ಗಳನ್ನು ವಿತರಿಸಬೇಕು. ಮುಂಬರುವ ದಿನಗಳಲ್ಲಿ ಯಾವುದೇ ಲೋಪಗಳಿಗೆ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದರು.
ನ್ಯಾಯ ಬೆಲೆ ಅಂಗಡಿಗೆ ಭೇಟಿ
ಜರಬಂಡಹಳ್ಳಿ ನ್ಯಾಯ ಬೆಲೆ ಅಂಗಡಿಗೆ ಭೇಟಿ ನೀಡಿದ ಡಿಸಿ, ಕೇಂದ್ರ ನಿರ್ವಹಣೆಯ ಆನ್ಲೈನ್ ಮಾಹಿತಿಗೂ ಹಾಗೂ ಭೌತಿಕ ಮಾಹಿತಿಗೂ ತಾಳೆಯಾಗದಿರುವುದನ್ನು ಪತ್ತೆ ಹಚ್ಚಿದರು. ತ್ವರಿತವಾಗಿ ವ್ಯತ್ಯಾಸವನ್ನು ಸರಿಪಡಿಸಬೇಕು. ಇದರ ಬಗ್ಗೆ ವರದಿಯನ್ನು ಸಲ್ಲಿಸಬೇಕು. ಮುಂಬರುವ ದಿನಗಳಲ್ಲಿ ಅನಿರೀತ ಭೇಟಿ ನೀಡಿ ಪರಿಶೀಲಿಸಿದ್ದು, ಯಾವುದೇ ಸಮಸ್ಯೆಗಳು ಕಂಡು ಬಂದಲ್ಲಿ ನಿರ್ದಾಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಆಹಾರ ಭದ್ರತೆಯನ್ನು ಒದಗಿಸಲು ಬಡ ಜನರಿಗೆ ಪಡಿತರ ಚೀಟಿಯನ್ನು ನೀಡಲಾಗಿರುತ್ತದೆ. ಹಾಗೆಯೇ ನ್ಯಾಯ ಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳಿಗೆ ಸಮರ್ಪಕ ರೀತಿಯಲ್ಲಿ ಆಹಾರ ಪದಾರ್ಥಗಳ ವಿತರಣೆಯಾಗಬೇಕು. ಯಾವುದೇ ವ್ಯಕ್ತಿಗಳು ಸವಲತ್ತುಗಳಿಂದ ವಂಚಿತರಾಗಬಾರದು. ಕೇಂದ್ರಗಳಲ್ಲಿ ಪಾರದರ್ಶಕ ನಿರ್ವಹಣೆಯ ವಿಚಾರದಲ್ಲಿ ರಾಜೀಯಾಗಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂಚೇನಹಳ್ಳಿ ತಹಸೀಲ್ದಾರ್ ಎನ್.ದೀಪ್ತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಪ್ಪ ಸೋಮಪ್ಪ ಗೌಡನಾಯ್ಕರ್ ಇದ್ದರು.