ಅವಕಾಶ ವಂಚಿತರಿಗೆ ಡಾನ್‌ಬಾಸ್ಕೊ ಬೆಂಬಲ

donbasco
Published on

ಗಂಗೊಳ್ಳಿ: ಗ್ರಾಮೀಣ ಪರಿಸರದಲ್ಲಿ ಅವಕಾಶ ವಂಚಿತ ಯುವ ಜನರಿಗಾಗಿ ತಾಂತ್ರಿಕ ಶಿಕ್ಷಣದೊಂದಿಗೆ ಆರಂಭಗೊಂಡ ಸಂಸ್ಥೆಯು ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಾಲ ಆಲದ ಮರವಾಗಿ ಬೆಳೆದು ಗ್ರಾಮೀಣ ಪ್ರದೇಶದಲ್ಲಿ ವರವಾಗಿ ಪರಿಣಮಿಸಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಧರ್ಮಗುರು ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದರು.

ಹೊಸಾಡು ಗ್ರಾಮದಲ್ಲಿರುವ ಡಾನ್ ಬಾಸ್ಕೊ ಶಾಲೆಯ ವಾರ್ಷಿಕೋತ್ಸವ ಹಾಗೂ ರಜತ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯ ಸ್ಥಾಪಕ ಮೈಕಲ್ ಮಸ್ಕರೇನ್ಹಸ್ ಹಾಗೂ ಕುಂದಾಪುರ ವಲಯದ ಶ್ರೇಷ್ಠ ಧರ್ಮಗುರು ಪಾವ್ಲ್ ರೇಗೋ ಶುಭಾಶಂಸನೆಗೈದರು. ಸಂಸ್ಥೆಯ ರಜತ ಮಹೋತ್ಸವದ ಲೋಗೊ ಬಿಡುಗಡೆಗೊಳಿಸಲಾಯಿತು. ಬಳಿಕ ಸಂಸ್ಥೆಯ ಸ್ಥಾಪಕ ಮೈಕಲ್ ಮಸ್ಕರೇನ್ಹಸ್ ಅವರನ್ನು ಸನ್ಮಾನಿಸಲಾಯಿತು. ಉಪ ವರಿಷ್ಠ ಬಾಂಜೆಲಾವ್ ತೆಶಿಯೇರಾ ಗೋವಾ ಅಧ್ಯಕ್ಷತೆ ವಹಿಸಿದರು. ಪ್ರಾಂಶುಪಾಲ ಮ್ಯಾಕ್ಸಿಮ್ ಡಿಸೋಜ ಪ್ರಸ್ತಾವನೆಗೈದರು. ಉಪಪ್ರಾಂಶುಪಾಲ ಬೈಸ್ ರೊಡ್ರಿಗಸ್, ಶಿಕ್ಷಕ-ರಕ್ಷಕ ಸಮಿತಿ ಅಧ್ಯಕ್ಷ ಸಂತೋಷ ಪಾಯಸ್, ಆಶಾ ಕರ್ವಾಲ್ಲೊ, ಮಂಗಳೂರು ಚರ್ಚ್ ಧರ್ಮಗುರು ಆನ್ಸಿಯೊ, ಡೆರಿಕ್, ಅನುಶ್ರೀ ಮತ್ತಿತರರು ಉಪಸ್ಥಿತರಿದ್ದರು. ರೋಶನ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net