ದಂತ ತಪಾಸಣಾ ಉಚಿತ ಶಿಬಿರ

DANTHA
Published on

ಕೊಕ್ಕರ್ಣೆ: ಸಾಹೇಬರಕಟ್ಟೆ ರೋಟರಿ ಕ್ಲಬ್ ಆಶ್ರಯದಲ್ಲಿ ಮಣಿಪಾಲ ಕೆಎಂಸಿಯ ದಂತ ವೈದ್ಯಕೀಯ ತಂಡದಿಂದ ಮಹಾತ್ಮಗಾಂಧಿ ಪ್ರೌಢಶಾಲೆ ಸಭಾಂಗಣದಲ್ಲಿ ದಂತ ತಪಾಸಣಾ ಉಚಿತ ಶಿಬಿರ ಜರುಗಿತು.

ರೋಟರಿ ಕ್ಲಬ್ ಅಧ್ಯಕ್ಷ ರಾಮ್‌ಪ್ರಕಾಶ್ ಉದ್ಘಾಟಿಸಿದರು. ಶಿಕ್ಷಕಿ ಗ್ರೇಸಿ, ರೋಟರಿ ಕ್ಲಬ್‌ನ ವಿಜಯ್ ಶೆಟ್ಟಿ, ಪ್ರಶಾಂತ್ ಜೋಗಿ, ವಿಜಯ್ ಕುಮಾರ್ ಶೆಟ್ಟಿ, ಡಾ.ಶಶಿಧರ್ ಆಚಾರ್ಯ, ಗೌತಮ್ ಹೆಗ್ಡೆ, ಯಶಸ್ವಿನಿ ಹೆಗ್ಡೆ, ಶ್ರೀಕೃಷ್ಣ ಶ್ಯಾನುಭಾಗ್, ಹೆರಿಯ ಪೂಜಾರಿ ಉಪಸ್ಥಿತರಿದ್ದರು. ರೋಟರಿ ಕ್ಲಬ್‌ನ ಪಿಎಚ್‌ಎಫ್ ಅಣ್ಣಯ್ಯ ದಾಸ್ ಕಾರ್ಯಕ್ರಮ ಆಯೋಜಿಸಿದ್ದರು. ಭಾಸ್ಕರ್ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net