ಅಂಗನವಾಡಿ ಕೇಂದ್ರಕ್ಕೆ ಭೂಮಿ ದಾನ

ಅಂಗನವಾಡಿ ಕೇಂದ್ರಕ್ಕೆ ಭೂಮಿ ದಾನ
Published on

ಕಿಕ್ಕೇರಿ: ಸರ್ಕಾರಿ ಜಾಗವನ್ನು ಕಬಳಿಸುವ ಕಾಲದಲ್ಲಿ ಮಕ್ಕಳಿಗೆ ಓದು ಬರೆಯಲು ಕಲಿಯಲು ತನ್ನ ಸ್ವಂತ ಜಾಗವನ್ನೇ ದಾನವಾಗಿ ನೀಡುವ ಮೂಲಕ ಅಂಕನಹಳ್ಳಿ ಗ್ರಾಮದ ರೈತ ಕುಮಾರ್ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲದೆ ಹಲವು ವರ್ಷಗಳಿಂದ ಮಕ್ಕಳಿಗೆ ಖಾಸಗಿ ಜಾಗದಲ್ಲಿ ಬೋಧಿಸಲಾಗುತ್ತಿತ್ತು. ಗ್ರಾಮದ ಪ್ರಮುಖರೊಂದಿಗೆ ಚರ್ಚಿಸಿ ರೈತ ಪಟೇಲ್ ಕೃಷ್ಣೇಗೌಡರ ಪುತ್ರ ಕುಮಾರ್ ಗ್ರಾಮದ ಪ್ರಮುಖ ಕೇಂದ್ರದಲ್ಲಿರುವ ತಮ್ಮ 30*75 ಅಳತೆಯ ನಿವೇಶನವನ್ನು ಸರ್ಕಾರಕ್ಕೆ ನೀಡಿದ್ದಾರೆ.

ಸ್ಥಳ ದಾನ ಪತ್ರವನ್ನು ಶಿಶು ಅಭಿವೃದ್ಧಿ ಇಲಾಖೆಗೆ ಶುಕ್ರವಾರ ನೀಡಿ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ನೆರವಾಗುವಂತೆ ಮನವಿ ಮಾಡಿದ್ದಾರೆ.

ಶಿಶು ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಅರುಣ್‌ಕುಮಾರ್, ಐಕನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎ.ಎಸ್. ಮಂಜೇಗೌಡ, ಪ್ರಮುಖರಾದ ಪ್ರವೀಣ, ಎ.ಬಿ. ರವಿ, ಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net