

ಅರಸೀಕೆರೆ ಗ್ರಾಮಾಂತರ: ತಾಲೂಕಿನಾ ಕಸಬಾ ಹೋಬಳಿ ಭೈರನನಾಯ್ಕಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ 1 ಲಕ್ಷ ರೂ. ಮೊತ್ತದ ಡಿಡಿಯನ್ನು ತಾಲೂಕಿನ ಯೋಜನಾಧಿಕಾರಿ ಅಕ್ಷತಾ ರೈ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಕಮಿಟಿಗೆ ಶನಿವಾರ ಹಸ್ತಾಂತರ ಮಾಡಿದರು.
ದೇವಸ್ಥಾನದ ಜೀರ್ಣೋದ್ಧಾರದ ಕೆಲಸಗಳು ಶ್ರೀಘ್ರವಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಕಸಬಾ ವಲಯದ ಮೇಲ್ವಿಚಾರಕಿ ವಾರಿಜಾ, ಸೇವಾ ಪ್ರತಿನಿಧಿ ಗೌರಮ್ಮ, ಶ್ಯಾಮ ಹಾಗೂ ದೇವಾಲಯ ಕಮಿಟಿಯವರು ಸದಸ್ಯರು ಗ್ರಾಮದ ಪ್ರಮುಖರು ಇದ್ದರು.