

ಹಿರೇಕೆರೂರ: ಒಬ್ಬರ ಜೀವ ಉಳಿಸುವ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ನಿಮಿತ್ತ ನಮೋ ಭಾರತ್, ರಾಣೆಬೆನ್ನೂರಿನ ಸಾಯಿ ಬ್ಲಡ್ ಬ್ಯಾಂಕ್ ವತಿಯಿಂದ ಆರೋಗ್ಯ ಸಮಿತಿ ಸದಸ್ಯ ರುದ್ರೇಶ ಬೆತೂರ ನೇತೃತ್ವದಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಬಿರದಲ್ಲಿ 75 ಜನರು ರಕ್ತದಾನ ಮಾಡಿದರು. ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ. ಬಣಕಾರ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ, ಪಪಂ ಅಧ್ಯಕ್ಷ ಕಂಠಾಧರ ಅಂಗಡಿ, ಸದಸ್ಯಹನುಮಂತ ಕುರಬರ, ರಮೇಶ ಕೋಡಿಹಳ್ಳಿ, ಗುರುಶಾಂತ ಯತ್ತಿನಹಳ್ಳಿ, ಚಂದ್ರಕಲಾ ಕೋರಿಗೌಡ್ರ, ಮುಖಂಡರಾದ ಸೃಷ್ಟಿ ಪಾಟೀಲ, ಶಿವಕುಮಾರ ಪ್ಯಾಟೇರ, ರವಿಶಂಕರ ಬಾಳಿಕಾಯಿ, ಜಗದೀಶ ದೊಡ್ಡಗೌಡ್ರ, ಡಾ.ಮನು ಮಾಗನೂರ, ಶ್ರೀಧರ ಜಿ.ಆರ್., ಬಿ.ಎಸ್. ಪೂಜಾ, ಕಾವ್ಯಾ ಕೋರಿಗೌಡ್ರ, ಪಲ್ಲವಿ ಡಂಬಳ, ಸಂತೋಷ ಕೆ.ಎನ್., ವಿಶ್ವನಾಥ ದಾಸರ, ಆಕಾಶ ಚಲವಾದಿ, ರವಿ ಬಡಳ್ಳೇರ, ಪ್ರವೀಣ ಸಣ್ಣಕ್ಕಿ, ಪ್ರಸನ್ನ ಜಾಡಬಂದಿ, ಸತೀಶ ಸಿರಸಂಗಿ, ವೀರೇಶ ಮರಿಗೌಡ್ರ ಇದ್ದರು.