

ಮದ್ದೂರು: ಪ್ರಪಂಚದಲ್ಲಿ ರಕ್ತಕ್ಕೆ ಪರ್ಯಾಯವಾದ ವಸ್ತು ಬೇರೆ ಯಾವುದೂ ಇಲ್ಲದ ಕಾರಣ ಪ್ರತಿಯೊಬ್ಬರು ರಕ್ತದಾನ ಮಾಡಿ ಸಂಕಷ್ಟದಲ್ಲಿರುವ ಜೀವ ಉಳಿಸಬೇಕು ಎಂದು ಸುಮುಖ ನಿಧಿ ಲಿಮಿಡೆಟ್ ಅಧ್ಯಕ್ಷ ಕೆ.ಆರ್.ಕುಮಾರ್ ಕುಂದನಕುಪ್ಪೆ ತಿಳಿಸಿದರು.
ಪಟ್ಟಣದ ಸುಮುಖ ನಿಧಿ ಲಿಮಿಡೆಟ್ ಕಚೇರಿಯಲ್ಲಿ ಭಾನುವಾರ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಭೂಮಿಪುತ್ರ ರೈತನ ಗೌರವಾರ್ಥವಾಗಿ ಹಾಗೂ 79ನೇ ಸ್ವಾತಂತ್ರೊೃೀತ್ಸವದ ಪ್ರಯುಕ್ತ ಆಗಸ್ಟ್ 15 ರಂದು ಮದ್ದೂರಿನ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ರೈತ ರಕ್ತದಾನ ಶಿಬಿರದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ಅಪಘಾತ, ಶಸ್ತ್ರ ಚಿಕಿತ್ಸೆ, ಹೆರಿಗೆ ಇನ್ನಿತರ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ ಹಾಗೂ ಪ್ರಸ್ತುತ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ತುಂಬಾ ಇರುವುದರಿಂದ ಆರೋಗ್ಯವಂತರು ರಕ್ತದಾನ ಮಾಡುವ ಮೂಲಕ ಸಹಕಾರ ನೀಡಬೇಕು ಎಂದರು.
ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಭೂಮಿಪುತ್ರ ರೈತನ ಗೌರವಾರ್ಥವಾಗಿ ಹಾಗೂ 79ನೇ ಸ್ವಾತಂತ್ರೊೃೀತ್ಸವದ ಪ್ರಯುಕ್ತ ಆಗಸ್ಟ್15 ವಿವಿಧ ಸಂಘಟನೆಗಳು ಒಗ್ಗೂಡಿ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಮೆಚ್ಚುಗೆಯ ವಿಷಯವಾಗಿದ್ದು ಹೆಚ್ಚಿನ ಪ್ರಮಾಣದ ರಕ್ತ ಸಂಗ್ರಹವಾಗಲಿ ಎಂದು ಶುಭ ಹಾರೈಸಿದರು.
ಪೊಲೀಸ್ ಸಿದ್ದರಾಜು, ತೈಲೂರು ಸತೀಶ್, ಗಣೇಶ್, ಪತ್ರಕರ್ತರಾದ ಎಂ.ಪಿ.ವೆಂಕಟೇಶ್, ಕೃಷ್ಣ ಇದ್ದರು.