ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ದೊಂಪದಬಲಿ

New Project (66)
Published on

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ವರ್ಷಾವಧಿ ಜಾತ್ರೋತ್ಸವದ ದೊಂಪದಬಲಿ ಮಂಗಳವಾರ ರಾತ್ರಿ ದೇವಳದ ಸಂತೆಗದ್ದೆಯಲ್ಲಿ ಪರಂಪರಾಗತವಾಗಿ ನಡೆಯಿತು. ವರ್ಷಾವಧಿ ಜಾತ್ರೋತ್ಸವದ ಕಟ್ಟಕಡೆಯ ಕಾರ್ಯಕ್ರಮವಾಗಿರುವ ಈ ದೊಂಪದ ಬಲಿಯಲ್ಲಿ ದೈವದ ಸೂಚನೆಯಂತೆ ದೇವಳದ ಬ್ರಹ್ಮರಥದ ಕಲಶವನ್ನು ಕೆಳಗಿಳಿಸುವ ಪ್ರಕ್ರಿಯೆ ನಡೆಯಿತು.

ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ರಾಧಾಕೃಷ್ಣ, ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ , ಸಮಿತಿ ಸದಸ್ಯರಾದ ಬಿ.ಗೋಪಾಲಕೃಷ್ಣ ರೈ, ಹರೀಶ್ ಉಪಾಧ್ಯಾಯ, ಅರ್ತಿಲ ಕೃಷ್ಣ ರಾವ್, ವೆಂಕಪ್ಪ ಪೂಜಾರಿ, ದೇವಿದಾಸ್ ರೈ, ಸೋಮನಾಥ, ಅನಿತಾ ಕೇಶವ ಗೌಡ, ರಮ್ಯ ರಾಜಾರಾಮ್, ಪ್ರಮುಖರಾದ ವಿದ್ಯಾಧರ ಜೈನ್, ಕಂಗ್ವೆ ವಿಶ್ವನಾಥ ಶೆಟ್ಟಿ, ಕೈಲಾರ್ ರಾಜಗೋಪಾಲ ಭಟ್, ಮೊದಲಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net