

ಕಾಸರಗೋಡು: ಚಂದ್ರಗಿರಿ ಸೇತುವೆಯಿಂದ ಹೊಳೆಗೆ ಹಾರಿದ್ದ ಯುವಕನ ಮೃತದೇಹ ಚೆಮ್ನಾಡ್ ಜಮಾಅತ್ ಮಸೀದಿ ಸನಿಹದ ಪತ್ತೆಯಾಗಿದೆ. ಕಾಸರಗೋಡು ಚೌಕಿಯ ಕ್ವಾಟ್ರರ್ಸ್‌ನಲ್ಲಿ ವಾಸವಾಗಿದ್ದ ತಳಂಗರೆ ತೆರುವತ್ ನಿವಾಸಿ ಸಯ್ಯದ್ ಸಕರಿಯ(21)ಮೃತಪಟ್ಟ ಯುವಕ. ಸಕರಿಯನ ಸ್ಕೂಟರ್ ಮಂಗಳವಾರ ರಾತ್ರಿ ಚಂದ್ರಗಿರಿ ಸೇತುವೆ ಬಳಿ ಸಂಶಯಾಸ್ಪದ ರೀತಿಯಲ್ಲಿ ನಿಲ್ಲಿಸಿರುವುದು ಕಂಡುಬಂದಿದ್ದು, ಹೊಳೆಗೆ ಹಾರಿರಬಹುದೆಂಬ ಸಂಶಯದಲ್ಲಿ ಅಗ್ನಿಶಾಮಕ ದಳದ ಸಹಾಯದಿಂದ ಹುಡುಕಾಟ ಆರಂಭಿಸಲಾಗಿತ್ತು. ತಡರಾತ್ರಿವರೆಗೂ ಹುಡುಕಾಟ ನಡೆಸಿದರೂ, ಪತ್ತೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಮತ್ತೆ ಶೋಧಕಾರ್ಯ ಮುಂದುವರಿಸಿದಾಗ ಮೃತದೇಹ ಪತ್ತೆಯಾಗಿದೆ. ಮೃತದೇಹ ಜನರಲ್ ಆಸ್ಪತ್ರೆ ಶವಾಗರದಲ್ಲಿರಿಸಲಾಗಿದೆ. ಸಕರಿಯ ನಗರದಲ್ಲಿ ತರಕಾರಿ, ಹಣ್ಣುಹಂಪಲು ವ್ಯಾಪಾರ ನಡೆಸುತ್ತಿದ್ದನೆನ್ನಲಾಗಿದೆ. ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.