

ಮದ್ದೂರು: ನಗರದ ಕೋಟೆ ಬೀದಿಯ ತಾಲೂಕು ಬ್ರಾಹ್ಮಣಸಭಾದ ಮಾಜಿ ಅಧ್ಯಕ್ಷ ದಿ.ಸುಬ್ರಹ್ಮಣ್ಯ ಶಾಸ್ತ್ರಿ ಅವರ ನಿವಾಸದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ನಡೆದ ಗೊಂಬೆಗಳ ಪೂಜೆ ಕಾರ್ಯಕ್ರಮ ನೋಡುಗರ ಕಣ್ಮನ ಸೆಳೆಯಿತು.
ನವರಾತ್ರಿ ಹಾಗೂ ವಿಜಯದಶಮಿ ಸಂದರ್ಭದಲ್ಲಿ ಮನೆ ದೇವರು ಚೌಡೇಶ್ವರಿ ಅಮ್ಮನವರ ಪೂಜೆ ಜತೆ ಬೊಂಬೆ ಹಬ್ಬವನ್ನೂ ಆಚರಿಸಲಾಗುತ್ತೆ. ಈ ವೇಳೆ ತರಹೇವಾರಿ ಗೊಂಬೆಗಳನ್ನು ಕೂರಿಸಿ ಪೂಜೆ ಸಲ್ಲಿಸಲಾಗುತ್ತೆ. ದಶಾವತಾರ, ಸೂರ್ಯದೇವರ ವಿಗ್ರಹ, ವಿಶ್ವರೂಪ ದರ್ಶನ, ಕೃಷ್ಣ ಸಖಿಯಾರೊಡನೆ ನೃತ್ಯ, ಪಾಂಡುರಂಗ, ವೆಂಕಟೇಶ್ವರ, ಶಿವ ಗೌರಿ ಗಣೇಶ್ ಸುಬ್ರಹ್ಮಣ್ಯ, ಹಿಂದೂ ಸರ್ವ ಧರ್ಮ ಗುರುಗಳು, ದಾಸಶ್ರೇಷ್ಠರು, ಸಪ್ತಮಾತೃಕೆಯರು, ಅಷ್ಟಲಕ್ಷ್ಮೀ, ಸಂಗೀತ ವೃಂದದವರು, ಶಿವ ಮಾರ್ಕಂಡೇಯ, ರಾಮ, ಸೀತಾ, ಲಕ್ಷ್ಮಣ, ಆಂಜನೇಯ, ಮಹಾರಾಜ ಅಂಬಾರಿ ದಸರಾ ಬೊಂಬೆಗಳು, ಅನ್ನಪೂರ್ಣೇಶ್ವರಿ, ಪ್ರಾಣಿಗಳು, ವಾಹನಗಳು ಸೇರಿ ವಿವಿಧ ಗೊಂಬೆಗಳು ನೋಡುಗರ ಕಣ್ಮನ ಸೆಳೆದಿದೆ.
ಗೊಂಬೆ ಹಬ್ಬದಲ್ಲಿ ಶಾಂತ ಶಿವಕುಮಾರ್, ಆರ್. ಸುಧೀರ್ ಕುಮಾರ್, ಎಸ್.ಕೌಶಲ್ ವಿದ್ವತ್, ವೀಣಾ ಸುಧೀರ್, ಕಲಾವಿದರ ಸಂಘದ ಅಧ್ಯಕ್ಷ ಮಹಾದೇವು ಇದ್ದರು.