ಕಡ್ಡಾಯವಾಗಿ ನಾಯಿಗಳಿಗೆ ಲಸಿಕೆ ಹಾಕಿಸಲಿ

12TLR1
Published on

ತಲ್ಲೂರ: ರೇಬೀಸ್​ ಸೋಂಕು ರೋಗವಾಗಿದ್ದು, ನಾಯಿಗಳಿಗೆ ಲಸಿಕೆ ಕೊಡಿಸಿ ಸುರತಾ ಕ್ರಮ ಕೈಗೊಳ್ಳಬೇಕು ಎಂದು ಪಶು ವೈದ್ಯಾಧಿಕಾರಿ ಜಾಕೀರಹುಸೇನ್​ ದೊಡಮನಿ ಹೇಳಿದರು.

ಗ್ರಾಮದ ಬಸವೇಶ್ವರ ಯುವಕ ಮಂಡಳ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಪಂ, ಯರಗಟ್ಟಿ ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆ ಆಶ್ರಯದಲ್ಲಿ ರೇಬೀಸ್​ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ರೇಬೀಸ್​

ಹುಚ್ಚುನಾಯಿಗಳ ಲಾಲಾರಸದಿಂದ ವೈರಾಣುಗಳ ಮೂಲಕ ಹರಡುವ ಮಾರಣಾಂತಿಕ ರೋಗವಾಗಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ರೇಬೀಸ್​ ರೋಗದ ಬಗ್ಗೆ ಜಾಗೃತಿ ಹೊಂದಬೇಕು ಎಂದರು. ಮುಖ್ಯಶಿಕ ರಾಜಶೇಖರ ದುಂಡನಕೊಪ್ಪ ಮಾತನಾಡಿದರು. ಮುಖ್ಯಶಿಕ ಡಿ.ಡಿ.ಭೋವಿ, ಪಶುಸಖಿ ಸುಜಾತಾ ಸರದಾರ, ಗೋವಿಂದ ಲಮಾಣಿ, ಲಕ್ಷ$್ಮಣ ಪಾಟೀಲ, ಎಸ್​.ಎ್​.ಮುರಗನ್ನವರ, ಎಸ್​.ಎಂ.ಹಂಜಿ, ಮಲ್ಲಿಕಾರ್ಜುನ ಬದಾಮಿ, ಎಸ್​.ಎ್​.ಬಡಿಗೇರ, ಎ.ಜೆ.ಕಾಂಬಳೆ, ಜಿ.ಎ.ಕೊಟ್ರಶೇಟ್ಟಿ, ಪಿ.ಎ.ಸುಣಧೋಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net