ಎಚ್‌ಡಿಕೆಗೆ ಮತ ಕೇಳುವ ಹಕ್ಕಿದೆಯೇ?

zxs
Published on

ರಾಮನಗರ: ಚನ್ನಪಟ್ಟಣ ಕ್ಷೇತ್ರದಿಂದ ಮುಖ್ಯಮಂತ್ರಿಯಾಗಿದ್ದ ಕುವಾರಸ್ವಾಮಿ ಜನರ ಕಷ್ಟಕ್ಕೆ ಸ್ಪಂದಿಸಿಲ್ಲ, ಇಲ್ಲಿನ ಬಡವರಿಗೆ ಸಹಾಯ ವಾಡಲು ಆಗದಿದ್ದವರಿಗೆ ಮತ್ತೆ ಮತ ಕೇಳುವ ಹಕ್ಕು ಕಳೆದುಕೊಂಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುವಾರ್ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಹೊಂಗನೂರು ಜಿಪಂನ ತಗಚಗೆರೆ ಹಾಗೂ ಭೂಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರ ಸೋಮವಾರ ಪ್ರಚಾರಸಭೆ ಉದ್ದೇಶಿಸಿ ವಾತನಾಡಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಲೆ ಏರಿಕೆ ಸಮಸ್ಯೆಗೆ ಮುಕ್ತಿ ನೀಡಿ ಸಾಮಾನ್ಯ ಜನರ ಬದುಕಲ್ಲಿ ಬದಲಾವಣೆ ತರಲು ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆ ಜಾರಿ ವಾಡಿದ್ದೇವೆ. ಇಂತಹ ಒಂದೇ ಒಂದು ಯೋಜನೆಯನ್ನು ನೀಡದ ಕುವಾರಣ್ಣ ಇಲ್ಲಿ ಬಂದು ಮತ ಕೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಹಾಯ ವಾಡಲು ಸಾಧ್ಯವಿರಲಿಲ್ಲವೇ?

ಕುವಾರಸ್ವಾಮಿ ಈ ಕ್ಷೇತ್ರದ ಜನಪ್ರತಿನಿಧಿಯಾಗಿ ಒಂದೇ ಒಂದು ದಿನ ಈ ಕ್ಷೇತ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ವಾಡಲು ಬರಲಿಲ್ಲ. ಹಾಗಾದರೆ ಶಾಸಕ ಸ್ಥಾನ ಏಕೆ ಬೇಕು ಎಂದು ಡಿಕೆಶಿ, ಈ ಭಾಗದಲ್ಲಿ ನೂರಾರು ಎಕರೆ ಜಮೀನು ಖರೀದಿ ವಾಡಿ ನಿವೇಶನ ಹಂಚಲಾಗುತ್ತಿದೆ. 5 ಸಾವಿರ ಕುಟುಂಬಗಳಿಗೆ ನಿವೇಶನ ಮಂಜೂರು ವಾಡಿಸಿದ್ದೇನೆ. ಈ ಕೆಲಸ ಕುವಾರಸ್ವಾಮಿ ಅವರಿಂದ ಸಾಧ್ಯವಾಗುತ್ತಿರಲಿಲ್ಲವೇ ಎಂದು ಟೀಕಿಸಿದರು.

ಏನು ಲಾಭ ಎಂದು ಆಲೋಚಿಸಿ

ಯೋಗೇಶ್ವರ್ ಹಾಗೂ ಕುವಾರಸ್ವಾಮಿ ಅವರ ಮಧ್ಯೆ ಏನಾಗಿದೆಯೋ ನಾನು ಚರ್ಚೆ ವಾಡುವುದಿಲ್ಲ. ನಾನು ವ್ಯಕ್ತಿ ಮೇಲೆ ರಾಜಕೀಯ ವಾಡುವುದಿಲ್ಲ. ನಿಮಗೇನು ಲಾಭ, ಕ್ಷೇತ್ರ ಹಾಗೂ ಕ್ಷೇತ್ರದ ಜನತೆಗೆ ಏನು ಲಾಭ ಎಂದು ಆಲೋಚನೆ ವಾಡಿ ಎಂದು ಡಿಕೆಶಿ ಹೇಳಿದರು.

ನಿಖಿಲ್ ಬಗ್ಗೆ ವಾತನಾಡಲ್ಲ

ನಾನು ಕುವಾರಸ್ವಾಮಿ ಅವರ ಮಗನ ಬಗ್ಗೆ ವಾತನಾಡಲ್ಲ. ಪಾಪದ ಕಂದ. ಅವರು ಇಲ್ಲಿ ನಿಲ್ಲು ಎಂದರೂ ನಿಲ್ಲುತ್ತಾನೆ, ಅಲ್ಲಿ ನಿಲ್ಲು ಎಂದರೂ ನಿಲ್ಲುತ್ತಾನೆ. ಕಣ್ಣೀರು ಹಾಕು ಎಂದರೂ ಹಾಕುತ್ತಾನೆ, ನಗು ಎಂದರೂ ನಗುತ್ತಾನೆ. ಆತನನ್ನು ನಾನು ಪ್ರಶ್ನೆ ವಾಡುವುದಿಲ್ಲ. ಆತ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಚುನಾವಣೆಯಲ್ಲಿ ಸ್ಪರ್ಧೆ ವಾಡಿರುವುದಾಗಿ ಹೇಳಿದ್ದು, ಅವರು ಒತ್ತಕ್ಕೆ ಸ್ಪರ್ಧಿಸಿದ್ದಾರೆಯೇ ಹೊರತು, ಜನರ ಸೇವೆಗಾಗಿ ಅಲ್ಲ ಎಂದು ಶಿವಕುವಾರ್ ತಿಳಿಸಿದರು.

ಅಭಿವೃದ್ಧಿ ಖಚಿತ

ಯೋಗೇಶ್ವರ್ ಅವರಿಗೆ ನಿಮ್ಮ ಕಷ್ಟ, ಸುಖ, ನೋವು ಗೊತ್ತಿದೆ. ನಿಮ್ಮ ಹಳ್ಳಿಗಳು ಗೊತ್ತಿದೆ. ಅವರಿಗೆ ಬೆಂಬಲವಾಗಿ ಸರ್ಕಾರವಿದೆ. ಅವರ ಬೆನ್ನಿಗೆ ಈ ಡಿ.ಕೆ. ಶಿವಕುವಾರ್ ಇದ್ದಾನೆ. ನಾನು ಎಂದಾದರೂ ಕೊಟ್ಟ ವಾತು ತಪ್ಪಿದ್ದೀನಾ? ನನಗೆ ಮಹಿಳೆಯರ ಮೇಲೆ ವಿಶೇಷ ನಂಬಿಕೆ ಇದೆ. ನಮ್ಮ ಎಲ್ಲ ಕಾರ್ಯಕ್ರಮಗಳು ಮಹಿಳೆಯರ ಮೇಲೆ ಕೇಂದ್ರೀಕೃತವಾಗಿವೆ. ಚನ್ನಪಟ್ಟಣದಲ್ಲಿ ಅಭಿವೃದ್ಧಿ ಪರ್ವ ವಾಡಿಯೇ ವಾಡುತ್ತೇವೆ. ಯೋಗೇಶ್ವರ್ ಅವರನ್ನು ವಿಧಾನಸೌಧಕ್ಕೆ ಕಳುಹಿಸಿ ನಿಮ್ಮ ಸೇವೆಗೆ ನಮ್ಮನ್ನು ಉಪಯೋಗಿಸಿಕೊಳ್ಳಿ ಎಂದು ಡಿಕೆಶಿ, ಕುವಾರಣ್ಣ ದಳವನ್ನು ಕೈಬಿಟ್ಟಾಯ್ತು. ಆ ಪಕ್ಷದ ಕಾರ್ಯಕರ್ತರು ನಮ್ಮ ಜತೆ ಕೈಜೋಡಿಸಿ ಎಂದರು.

"ನಾನು ಆಡಳಿತ ಪಕ್ಷದಲ್ಲಿದ್ದು, ನನ್ನ ಮೇಲೆ ಹಾಗೂ ಯೋಗೇಶ್ವರ್ ಅವರ ಮೇಲೆ ಜವಾಬ್ದಾರಿ ಇದೆ. ನಿಮ್ಮ ಬದುಕಿನಲ್ಲಿ ಬದಲಾವಣೆ ತರುವ ಸಂಕಲ್ಪ ವಾಡಿ ನಾವು ನಿಮ್ಮ ಮುಂದೆ ಬಂದಿದ್ದೇವೆ. ನಾನು ಈ ಭಾಗದ ಶಾಸಕನಾಗಿದ್ದಾಗ ಪ್ರತಿ ವರ್ಷ ಅಧಿಕಾರಿಗಳನ್ನು ಕರೆದುಕೊಂಡು ನಿಮ್ಮ ಊರಿಗೆ ಬರುತ್ತಿದ್ದೆ. ಇಲ್ಲಿ ಕೇವಲ ಯೋಗೇಶ್ವರ್ ವಾತ್ರ ಅಭ್ಯರ್ಥಿಯಲ್ಲ. ಡಿ.ಕೆ. ಶಿವಕುವಾರ್ ಹಾಗೂ ಸಿದ್ದರಾಮಯ್ಯ ಅವರೂ ಅಭ್ಯರ್ಥಿ ಎಂದು ತಿಳಿದು ಮತಹಾಕಿ."

ಡಿ.ಕೆ. ಶಿವಕುವಾರ್, ಡಿಸಿಎಂ

ನಮ್ಮ ಸರ್ಕಾರ ಮಡಕೆಯಲ್ಲ

ನಮ್ಮ ಸರ್ಕಾರ ಮುಂದಿನ ಮೂರೂವರೆ ವಷರ್ ವಾತ್ರವಲ್ಲ. ಆನಂತರದ ಐದು ವರ್ಷಗಳ ಅವಧಿಗೂ ಆಡಳಿತ ನಡೆಸಲಿದೆ. ಕನಕಪುರದ ಜನ ಹೇಗೆ ನನನ್ನು 1.23 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದರೋ ಅದೇ ರೀತಿ ಯೋಗೇಶ್ವರ್ ಅವರನ್ನು ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಿಕೊಳ್ಳಬೇಕು. ನಾನು ಇಲ್ಲಿ ಉದ್ಯೋಗ ಮೇಳ ವಾಡಿದ ನಂತರ ಕುವಾರಸ್ವಾಮಿ ಅವರು ಮಂಡ್ಯದಲ್ಲಿ ಉದ್ಯೋಗ ಮೇಳ ವಾಡಿದ್ದಾರೆ. ಅದೇ ಕೆಲಸವನ್ನು ಚನ್ನಪಟ್ಟಣದಲ್ಲಿ ಯಾಕೆ ವಾಡಲಿಲ್ಲ ಎಂದ ಶಿವಕುಮಾರ್, ಇಲ್ಲಿ ಜಾಗ ಖಾಲಿ ವಾಡಿ ಯೋಗೇಶ್ವರ್ ಅವರನ್ನು ತಬ್ಬಿಕೊಂಡೇ ಮೋಸ ವಾಡಲು ಪ್ರಯತ್ನಿದರು. ಅದು ಯೋಗೇಶ್ವರ್‌ಗೆ ಅರ್ಥವಾಗಿ ಜನರಿಗೆ ಸಹಾಯ ವಾಡಬೇಕಾದರೆ ಕಾಂಗ್ರೆಸ್‌ನಿಂದ ವಾತ್ರ ಸಾಧ್ಯ ಎಂದು ಅರಿತು ಕೈ ಸೇರಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net