

ಹರೀಶ್ ಬೇಲೂರು ಬೆಂಗಳೂರು
ದುಂಡಾವರ್ತನೆ, ಅಸಭ್ಯ ಪದಗಳಿಂದ ನಿಂದನೆ, ನಿಗದಿಗಿಂತ ದುಪ್ಪಟ್ಟು ದರ ವಸೂಲಿ, ಪ್ರಯಾಣಿಕರ ಜತೆ ಅಸಭ್ಯ ವರ್ತನೆ, ಪೀಕ್ ಅವರ್ನಲ್ಲಿ ಯದ್ವಾತದ್ವಾ ಸುಲಿಗೆ, ಡಿಜಿಟಲ್ ಮೀಟರ್ ಬಳಕೆ ನಿರಾಸಕ್ತಿ..... ಹೀಗೆ ರಾಜಧಾನಿಯಲ್ಲಿ ಪ್ರತಿನಿತ್ಯ ಆಟೋಗಳ ಚಾಲಕರು ಹಾಗೂ ಪ್ರಯಾಣಿಕರ ನಡುವೆ ಒಂದಿಲ್ಲೊಂದು ಕಾರಣಕ್ಕೆ ನಡೆಯುತ್ತಿರುವ ಟನೆಗಳು ಸಾಮಾನ್ಯವಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಅಂದಾಜು 2 ಲಕ್ಷಕ್ಕೂ ಅಧಿಕ ಆಟೋಗಳಿವೆ. ಆ್ಯಪ್ ಆಧಾರಿತ ಸೇವೆ ನೀಡಲು ಸರ್ಕಾರ ಅನುಮತಿ ಕೊಟ್ಟಿದೆ. ಹೀಗಾಗಿ, ಚಾಲಕರು ದುಬಾರಿ ಬೆಲೆ ಕೇಳುವುದು ಮತ್ತು ನಿಗದಿತ ಸ್ಥಳಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ರಾಜಧಾನಿಯ ಬಹುತೇಕ ಜನರು ಆ್ಯಪ್ನಲ್ಲಿ ಆಟೋರಿಾ ಬುಕಿಂಗ್ ಮಾಡುತ್ತಾರೆ. ಆದರೆ, ಓಲಾ, ಊಬರ್,ರ್ಯಾಪಿಡೋ, ಹಾಗೂ "ನಮ್ಮ ಯಾತ್ರಿ' ಸೇರಿ ಇತ್ಯಾದಿ ಅಗ್ರಿಗೇಟರ್ ಆ್ಯಪ್ಗಳಿಂದ ಸೇವೆ ನೀಡುತ್ತಿರುವ ಆಟೋಗಳು, ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ವಸೂಲಿ ಮಾಡುವ ಮುಖೇನ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿವೆ. ಅಲ್ಲದೆ, ಬರೀ ಬುಕಿಂಗ್ ಸೇವೆ ಒದಗಿಸುವ ಅಗ್ರಿಗೇಟರ್ ಕಂಪನಿಗಳು ಕಮಿಷನ್ ಪಡೆಯುವ ಹಣವನ್ನು ಪ್ರಯಾಣಿಕರ ಮೇಲೆ ವಿಧಿಸಿ ಕೋಟ್ಯಂತರ ರೂ.ಅದಾಯ ಮಾಡಿಕೊಳ್ಳುತ್ತಿವೆ. ಆ್ಯಪ್ ಮೂಲಕ ಸೇವೆ ನೀಡುವ ಆಟೋಗಳಿಗೆ ಇಂತಿಷ್ಟು ದರ ನಿಗದಿಗೊಳಿಸಿದರೂ ನಿಯಮ ಪಾಲನೆಯಾಗುತ್ತಿಲ್ಲ. ಕೆಲವೊಮ್ಮೆ ಸಾರಿಗೆ ಇಲಾಖೆಯು ಎಚ್ಚರಿಕೆ ನೀಡಿದ್ದರೂ ಪ್ರಯೋಜನವಾಗಿಲ್ಲ.
ಡಿಜಿಟಲ್ ಮೀಟರ್ ನಿಯಮಕ್ಕೆ ಬ್ರೇಕ್: ನಗರದಲ್ಲಿ ಓಡಾಡುವ ಆಟೋಗಳಿಗೆ ಮೀಟರ್ ಕಡ್ಡಾಯವೆಂದು ಸರ್ಕಾರ ಆದೇಶ ಹೊರಡಿಸಿ ಪ್ರತಿ 2 ಕಿಮೀ.ಗೆ 30 ರೂ.ದರ ನಿಗದಿಪಡಿಸಿದೆ. ಆದರೆ, ನಗರದಲ್ಲಿರುವ ಒಟ್ಟು ಆಟೋಗಳ ಪೈಕಿ ಶೇ.70 ಆಟೋಗಳು ಆ್ಯಪ್ ಆಧಾರಿತ ಸೇವೆ ನೀಡುತ್ತಿದ್ದು,ಡಿಜಿಟಲ್ ಮೀಟರ್ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸಿವೆ. ಬಹುತೇಕ ಆಟೋಗಳಿಗೆ ಮೀಟರ್ ಇದ್ದರೂ ಹಾಕುತ್ತಿಲ್ಲ. ಕೆಲ ಆಟೋ ಚಾಲಕರು ಮಾತ್ರ ಡಿಜಿಟಲ್ ಮೀಟರ್ ನಿಯಮ ಪಾಲಿಸುತ್ತಿದ್ದಾರೆ. ಕೆಲ ಸಂದರ್ಭದಲ್ಲಿ ಮೀಟರ್ ಮೇಲೆ 10 ಅಥವಾ 20 ರೂ. ಕೇಳುವುದು ಸಾಮಾನ್ಯವಾಗಿದೆ. ರಾತ್ರಿ ವೇಳೆ ಹೆಚ್ಚಿನ ಹಣ ಕೊಟ್ಟರೆ ಮಾತ್ರ ಆಟೋ ಸೇವೆ ಜನರಿಗೆ ಲಭಿಸುತ್ತಿದೆ. ಪ್ರಯಾಣಿಕರ ಅನಿವಾರ್ಯತೆಯನ್ನೇ ಚಾಲಕರು ಬಂಡವಾಳ ಮಾಡಿಕೊಂಡಿದ್ದಾರೆ.
ಪ್ರೀಪೇಡ್ ಆಟೋ ಸೇವೆ ಇಲ್ಲ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಹೊರತುಪಡಿಸಿ ನಗರದ ವಿವಿಧ ಕಡೆಗಳಲ್ಲಿ ಪ್ರೀಪೇಡ್ ಆಟೋ ಸೇವೆಯೇ ಇಲ್ಲದಂತಾಗಿದೆ. ರೈಲ್ವೆ ನಿಲ್ದಾಣದಲ್ಲಿ ಈ ಸೇವೆ ಇದ್ದರೂ ಪ್ರಯಾಣಿಕರಿಗೆ ಸೂಕ್ತವಾಗಿ ಸದ್ಬಳಕೆಯಾಗುತ್ತಿಲ್ಲ. ಪ್ರೀಪೇಡ್ ಬೂತ್ಗಳ ಮುಂಭಾಗ ಬೆರಳಣಿಕಷ್ಟೇ ಆಟೋಗಳು ಇರುತ್ತವೆ. ಉಳಿದ ಆಟೋ ಚಾಲಕರು ಮನಸೋಇಚ್ಛೆ ಹಣ ಕೇಳುತ್ತಾರೆ. ಇಂಥ ಚಾಲಕರ ಸುಲಿಗೆ ಕಡಿವಾಣ ಹಾಕುವುದಾಗಿ ಇಲಾಖೆ ಅಧಿಕಾರಿಗಳು ಪದೇಪದೆ ಹೇಳುತ್ತಿದ್ದರೂ ಭರವಸೆ ಹುಸಿಯಾಗಿದೆ.
ಪ್ರಯಾಣಿಕರ ದೂರು ದುಮ್ಮಾನಗಳು
* ಪಿಕ್ ಅವರ್ ಅಥವಾ ಮಳೆ ಬಂದಾಗ ನಿಗದಿಗಿಂತ ಮೂರು ಪಟ್ಟು ಅಧಿಕ ದರ ಬೇಡಿಕೆ
* ಮೀಟರ್ ಯಾಕೆ ಹಾಕೋದಿಲ್ಲ ಎಂದು ಪ್ರಶ್ನಿಸಿದವರಿಗೆ ನಿಂದನೆ
* ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ, ಕೃ.ರಾ. ಮಾರುಕಟ್ಟೆ, ಕೆಂಪೇಗೌಡ ಬಸ್ ನಿಲ್ದಾಣ ಮತ್ತಿತರ ಸ್ಥಳಗಳಲ್ಲಿ ಶೇ. 90 ಆಟೋ ಚಾಲಕರಿಂದ ಮೀಟರ್ ಹಾಕಲು ನಕಾರ
* ಕೆಲವೊಮ್ಮೆ ಬುಕಿಂಗ್ ಮಾಡಿದಾಗ 200 ರೂ. ಅಸುಪಾಸಿನಲ್ಲಿ ತೋರಿಸುವ ದರವೂ ಆಟೋ ಇಳಿದಾಗ 230-250 ರೂ.ಗೆ ಏರಿಕೆ
* ಚಾಲಕರು ಹೆಚ್ಚು ಮೊತ್ತದ ಕೇಳಿದ್ದ ಬಗ್ಗೆ ದೂರು ದಾಖಲಿಸಲು ಆ್ಯಪ್ನಲ್ಲಿ ವ್ಯವಸ್ಥೆ ಇಲ್ಲ
* ಕಮಿಷನ್ಗಾಗಿ ಸೇವೆ ನೀಡುತ್ತಿರುವ ಅಗ್ರಿಗೇಟರ್ ಆ್ಯಪ್ಗಳು
* ಕೆಲ ಆಟೋ ಚಾಲಕರಿಂದ ಮಾತ್ರ ಡಿಜಿಟಲ್ ಮೀಟರ್ ನಿಯಮ ಪಾಲನೆ
* ಆ್ಯಪ್ ಆಧಾರಿತ ಸೇವೆ ಚೆನ್ನಾಗಿದ್ದರೂ ಪರಿಸ್ಥಿತಿ ಲಾಭ ಪಡೆದು ನಿಯಮಬಾಹಿರವಾಗಿ ದರ ವಸೂಲಿ
* ಟ್ರಿಪ್ ಕ್ಯಾನ್ಸಲ್ ಮಾಡಿದರೆ ನಿಂದನೆ
ಕೆಎಸ್ಆರ್ ರೈಲುನಿಲ್ದಾಣದಿಂದ ಚಾಮರಾಜಪೇಟೆಯ 5ನೇ ಮುಖ್ಯರಸ್ತೆಗೆ 3 ಕಿ.ಮೀ. ಆಗಬಹುದು. ಮೀಟರ್ ಹಾಕಿಕೊಂಡು ಹೋದರೆ 50 ರೂ. ಒಳಗೆ ಆಗುತ್ತದೆ. ಆದರೆ, ರ್ಯಾಪಿಡೋದಲ್ಲಿ ಬುಕಿಂಗ್ ಮಾಡಿದಾಗ 87 ರೂ. ತೋರಿಸಿತ್ತು. ಸ್ಥಳಕ್ಕೆ ತಲುಪಿ ಚಾಲಕ ಟ್ರಿಪ್ ಕೊನೆಗೊಳಿಸಿದಾಗ 102 ರೂ. ಪಾವತಿಸುವಂತೆ ಆ್ಯಪ್ನಲ್ಲಿ ತೋರಿಸಿತ್ತು. ಬೇರೆ ಕಾರಣವಿಲ್ಲದೆ ಹಣವನ್ನು ಪಾವತಿಸಿದ್ದೆ. ಇಂಥ ಟನೆಗಳು ಸಾಕಷ್ಟು ಬಾರಿ ನಡೆದಿವೆ.
| ಹೆಸರು ಹೇಳಲಿಚ್ಛಿಸದ ಪ್ರಯಾಣಿಕ