

ಬೈಲಕುಪ್ಪೆ: ದೊಡ್ಡ ಹರವೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 12 ಜನರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
12 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 12 ಸ್ಥಾನಗಳಲ್ಲೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಸೈಯದ್ ಉಜ್ಮಾ ಸಮಾನ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ದೊಡ್ಡ ಹರವೆ ರಾಜಯ್ಯ, ಸ್ವಾಮಿಗೌಡ, ಲೋಕೇಶ, ಕಾಳಪ್ಪ, ವಿಷ್ಣುಚಾರಿ, ಬಿ.ಟಿ.ವೆಂಕಟೇಶ, ಸಣ್ಣಯ್ಯ, ಸಾಕಮ್ಮ, ಸ್ವಾಮಿನಾಯಕ, ಭಾಗ್ಯಮ್ಮ, ಮಂಜು ನಿರ್ದೇಶಕರಾಗಿ ಆಯ್ಕೆಗೊಂಡರು.
ಸಾಲಗಾರರಲ್ಲದ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕುಮಾರಸ್ವಾಮಿ ಗೆಲುವು ಸಾಧಿಸಿದರು.
ಬೈಲಕುಪ್ಪೆ ಗ್ರಾ.ಪಂ. ಅಧ್ಯಕ್ಷ ರಘು, ಸದಸ್ಯ ನಿಶಾರ್ ಅಹಮದ್, ಭಾರತಿ ಪ್ರಕಾಶ್, ಮುಖಂಡ ರಾಮೇಗೌಡ. ಬೈಲಕುಪ್ಪೆ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಸುಬ್ರಮಣ್ಯ, ಮಂಜೇಗೌಡ, ನಾಗರಾಜು, ವೆಂಕಟೇಶ್, ಕುಮಾರಸ್ವಾಮಿ ಇತರರು ಇದ್ದರು.