

ಕೆ.ಎಂ.ದೊಡ್ಡಿ: ಸಮೀಪದ ದೊಡ್ಡರಸಿನಕೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಂ.ಕೆ.ಚಂದ್ರಶೇಖರ್, ಉಪಾಧ್ಯಕ್ಷರಾಗಿ ಸಮೀನಾಭಾನು ಗುರುವಾರ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಡಿ.ಎಂ.ಮಂಚೇಗೌಡ, ಉಪಾಧ್ಯಕ್ಷೆ ಎಚ್.ಬಿ ಸವಿತಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಧ್ಯಕ್ಷರಾಗಿ ಎಂ.ಕೆ.ಚಂದ್ರಶೇಖರ್, ಉಪಾಧ್ಯಕ್ಷೆಯಾಗಿ ಸಮೀನಾಭಾನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಎಂ.ಕೆ.ಚಂದ್ರಶೇಖರ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳ ಅಭಿವೃದ್ಧಿಗೆ ಹಾಗೂ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಡಿ.ಎಂ.ಮಂಚೇಗೌಡ ಜೆಡಿಎಸ್ ಮುಖಂಡರಾದ ಚಿಕ್ಕಹುಚ್ಚೇಗೌಡ, ಗುರುದೇವರಹಳ್ಳಿ ಅರವಿಂದ್ ,ದೇವರಹಳ್ಳಿ ವೆಂಕಟೇಶ್, ಮುಟ್ಟನಹಳ್ಳಿ ಕಾಳೇಗೌಡ, ಡಿ.ಎ.ಕೆರೆ ಪ್ರದೀಪ್, ಸದಸ್ಯರಾದ ಡಿ.ಎಸ್.ಶರತ್, ಶ್ರೀನಿವಾಸ್, ಯತೀಶ್ ಸುರೇಶ್, ಡಿ.ಎಂ.ರಘು, ಪುಟ್ಟಸ್ವಾಮಿ, ಹೊನ್ನೇಗೌಡ, ಶೇಖರ್, ದಿವ್ಯಾ, ಸವಿತಾ, ಕೃಪಾ, ಹರ್ಷಿತಾ, ಜ್ಯೋತಿ, ಕೆ.ಎನ್.ಶಿವಲಿಂಗಯ್ಯ , ವೀಣಾ, ಸುನಂದಾ ಸೌಮ್ಯಶ್ರೀ, ರಘು ಮತ್ತಿತರರು ಹಾಜರಿದ್ದರು.