ಡಾಕ್ಟರ್ಸ್​ ಸೇವೆ ಅತ್ಯಂತ ಪವಿತ್ರ

1blh4 ಇಂಚಲ ..doctors day
Published on

ಬೈಲಹೊಂಗಲ: ನಂಬಿ ಬಂದ ಜನರ ಆರೋಗ್ಯ, ಪ್ರಾಣ ಕಾಪಾಡುವ ವೈದ್ಯರ ಸೇವೆ ಅತ್ಯಂತ ಪವಿತ್ರವಾಗಿದೆ ಎಂದು ಸುೇತ್ರ ಇಂಚಲದ ಶ್ರೀ ಶಿವಾನಂದ ಭಾರತಿ ಶಿಣ ಸಂಸ್ಥೆಯ ಆಡಳಿತಾಧಿಕಾರಿ ಪೂರ್ಣಾನಂದ ಭಾರತಿ ಸ್ವಾಮಿಗಳು ಹೇಳಿದರು.

ಇಂಚಲ ಗ್ರಾಮದ ಶ್ರೀ ಶಿವಯೋಗೀಶ್ವರ ಗ್ರಾಮೀಣ ಆಯುರ್ವೇದಿಕ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಮಂಗಳವಾರ ಆಯೋಜಿಸಿದ್ದ ವೆದ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿದರು.

ಡಾ. ಶಿವಾನಂದ ಭಾರತಿ ಅಪ್ಪನವರ ಆಶೀರ್ವಾದದಿಂದ ಶ್ರೀ ಶಿವಯೋಗೀಶ್ವರ ಗ್ರಾಮೀಣ ಆಯುರ್ವೇದಿಕ ವೆದ್ಯಕಿಯ ಮಹಾವಿದ್ಯಾಲಯದಲ್ಲಿ ಪ್ರತಿ ವರ್ಷ 100 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರಲ್ಲದೆ, 100 ವಿದ್ಯಾರ್ಥಿಗಳು ವೈದ್ಯರಾಗಿ ಹೊರಹೊಮ್ಮುತ್ತಿದ್ದಾರೆ. ಸುಸಜ್ಜಿತ ಕಟ್ಟಡ, ನುರಿತ ವೆದ್ಯರು, ಅತ್ಯಾಧುನಿಕ ಯಂತ್ರೋಪಕರಣ ಸೇರಿ ಎಲ್ಲ ಸೌಕರ್ಯ ಜತೆ ಆರೋಗ್ಯ ರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.

ಡಾ. ಶಿವಜಾತ ಪಾಟೀಲ, ಡಾ. ಕೆ.ಎಚ್​.ಪಚ್ಚೆಣ್ಣವರ, ಡಾ. ಐ.ಎಸ್​.ಮಠಪತಿ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ. ಜಿ. ವಿನಯ ಮೋಹನ, ಉಪಪ್ರಾಚಾರ್ಯ ಡಾ. ಜಿ.ಎಸ್​.ಹಾದಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net